Swavalanbi Sarati Yojane: ಈಗ ಆಟೋ, ಟ್ಯಾಕ್ಸಿ, ಗೂಡ್ಸ್ ವಾಹನ ಖರೀದಿ ಮಾಡಲು 3 ಲಕ್ಷ ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ.
ಈಗ ಡಾ।। ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಅದರ ಅಂಗಸಂಸ್ಥೆಗಳಾದಂತಹ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಸಪಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗಳು ಈಗ ಈ ಒಂದು ವಿವಿಧ ಯೋಜನೆಗಳ ಅಡಿಯಲ್ಲಿ ಸಾಲ ಮತ್ತು ಸಹಾಯಧನ ಸೌಲಭ್ಯಗಳನ್ನು ನೀಡಲು ಈಗ ಅರ್ಹ ಇರುವಂತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸಲ್ಲಿಸಲು ಈಗ ಪ್ರಾರಂಭ ಮಾಡಲಾಗಿದೆ. ಅದೇ ರೀತಿಯಾಗಿ ಎಲ್ಲಾ ರೀತಿಯ ಮಾಹಿತಿಗಳನ್ನು ತಿಳಿಯಲು ನಮ್ಮ ವಾಟ್ಸಾಪ್ ಗ್ರೂಪ್ ಆಗು ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ.
ಈ ಯೋಜನೆಯ ವಿವರ
ಈಗ ಸರ್ಕಾರ ಈ ಒಂದು ಕೆಳಗಿನ ಯೋಜನೆಗಳ ಮೂಲಕ ಸ್ವಯಂ ಉದ್ಯೋಗಗಳಷ್ಟೇ ಅಲ್ಲದೆ ಬಡವರ್ಗದವರಿಗೆ ಆರ್ಥಿಕ ಸಹಾಯವನ್ನು ನೀಡಲು ಮುಂದಾಗಿದೆ.
- ಉದ್ಯಮಶೀಲದ ಅಭಿವೃದ್ಧಿ ಯೋಜನೆ
- ಕುರಿ ಸಾಕಾಣಿ ಯೋಜನೆ
- ಕಿರು ಆರ್ಥಿಕ ಚಟುವಟಿಕೆ ಸಾಲ ಯೋಜನೆ
- ಸ್ವಯಂ ಉದ್ಯೋಗ ನೇರ ಸಾಲ ಯೋಜನೆ
- ಸ್ವಾವಲಂಬಿ ಸಾರಥಿ ಯೋಜನೆ
- ಹೈನುಗಾರಿಕೆ ಯೋಜನೆ
- ಗಂಗಾ ಕಲ್ಯಾಣ ಯೋಜನೆ
- ಭೂ ಒಡೆತನ ಯೋಜನೆ
- ಮೊಬೈಲ್ ಕ್ಯಾಂಟೀನ್ ಯೋಜನೆ
- ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆ
ಅರ್ಹತೆಗಳು ಏನು?
- ಅರ್ಜಿದಾರ ವಯಸ್ಸು ಕನಿಷ್ಠ 21 ರಿಂದ 45 ವರ್ಷದ ಒಳಗೆ ಇರಬೇಕು.
- ಹಾಗೆ ಅರ್ಜಿದಾರರು ನಿರುದ್ಯೋಗಿ ಆಗಿರಬೇಕಾಗುತ್ತದೆ.
- ಆನಂತರ ಕುಟುಂಬದ ಸದಸ್ಯರು ಸರ್ಕಾರಿ ನೌಕರಿಯನ್ನು ಹೊಂದಿರಬಾರದು.
- ಅರ್ಜಿದಾರರು ಬಡತನ ರೇಖೆಗಿಂತ ಕೆಳಗಿನವರು ಆಗಿರಬೇಕು.
- ಹಾಗೆ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿರಬೇಕು.
- ವಾರ್ಷಿಕ ಆದಾಯ 1.5 ಲಕ್ಷಕ್ಕಿಂತ ಕಡಿಮೆ ಇರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಡ್ರೈವಿಂಗ್ ಲೈಸೆನ್ಸ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಮೊಬೈಲ್ ನಂಬರ್
ಸ್ವಾವಲಂಬಿ ಸಾರಥಿ ಯೋಜನೆಯ ಮಾಹಿತಿ
ಈಗ ಈ ಒಂದು ಯೋಜನೆ ಮೂಲಕ ಅರ್ಜಿದಾರರು ನಾಲ್ಕು ಚಕ್ರದ ವಾಹನಗಳು ಅಂದರೆ ಆಟೋ ಟ್ಯಾಕ್ಸಿಗಳನ್ನು ಖರೀದಿ ಮಾಡಲು ಮೂರು ಲಕ್ಷದವರೆಗೆ ಸಬ್ಸಿಡಿ ಯನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಇದರ ಜೊತೆಗೆ ಈಗ ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡುವ ಅವಕಾಶ ಕೂಡ ದೊರೆಯುತ್ತದೆ.
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈಗ ಸೇವಾ ಸಿಂಧೂ ಪೋರ್ಟಲ್ ನಲ್ಲಿ ಈಗ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಲಾಭ ಪಡೆಯಬಹುದು. ಒಂದು ವೇಳೆ ಅರ್ಜಿಯನ್ನು ಸಲ್ಲಿಸಲು ಬಾರದೆ ಇದ್ದರೆ ನಿಮ್ಮ ಹತ್ತಿರ ಇರುವ ಗ್ರಾಮ ಒನ್, ಕರ್ನಾಟಕ ಒನ್. CSC ಕೇಂದ್ರಗಳಿಗೆ ಭೇಟಿಯನ್ನು ನೀಡಿ. ಅಲ್ಲಿಯೂ ಕೂಡ ಅರ್ಜಿ ಸಲ್ಲಿಸಬಹುದು.