PM Kisan Amount Credit: ರೈತರಿಗೆ ಮತ್ತೊಂದು ಸಿಹಿ ಸುದ್ದಿ? PM ಕಿಸಾನ್ ಯೋಜನೆಯ ಹಣ ಬಿಡುಗಡೆ! ಈಗಲೇ ಖಾತೆ ಚೆಕ್ ಮಾಡಿಕೊಳ್ಳಿ?
ಈಗ ಸ್ನೇಹಿತರೆ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಈಗಾಗಲೇ ಪ್ರಾರಂಭ ಮಾಡಿದಂತಹ ಈ ಒಂದು PM ಕಿಸಾನ್ ಯೋಜನೆಯ 20ನೇ ಕಂತಿನ ಹಣವು ಈಗ ಆಗಸ್ಟ್ 2ರಂದು ವಾರಣಾಸಿಯಲ್ಲಿ ನಡೆದಂತ ಸಮಾರಂಭದಲ್ಲಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈ ಒಂದು ಹಂತದಲ್ಲಿ ಈಗ ದೇಶದಲ್ಲಿರುವಂತಹ 9.2 ಕೋಟಿ ರೈತರ ಖಾತೆಗಳಿಗೆ ಈಗ ಈ ಒಂದು 2000 ಹಣವನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ. ಒಟ್ಟಾರೆಯಾಗಿ ಈ ಮೂಲಕ 20,500 ಕೋಟಿಗಳನ್ನು ಈಗಾಗಲೇ ರೈತರಿಗೆ ವಿತರಣೆಯನ್ನು ಮಾಡಲಾಗಿದೆ.
ಈ ಯೋಜನೆಯ ವಿವರ ಮತ್ತು ಮಾಹಿತಿ
ಈಗ ಪಿಎಂ ಕಿಸಾನ್ ಯೋಜನೆಯನ್ನು 2019 ಫೆಬ್ರವರಿ 2ರಂದು ಪ್ರಾರಂಭ ಮಾಡಲಾಯಿತು. ಈ ಒಂದು ಯೋಜನೆ ಅಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಕೂಡ ಈಗ ವಾರ್ಷಿಕವಾಗಿ 6000 ಸಹಾಯಧನವನ್ನು ಮೂರು ಕಂತುಗಳಲ್ಲಿ ಪಡೆದುಕೊಳ್ಳುತ್ತಿದ್ದರು. ಅದೇ ರೀತಿಯಾಗಿ ಒಂದು ಹಣವು ನೇರವಾಗಿ ರೈತರ ಖಾತೆಗಳಿಗೆ DBT ಮೂಲಕ ಹಣವು ನೇರವಾಗಿ ಜಮಾ ಆಗುತ್ತದೆ. ಈ ಒಂದು ಹಣವು ಯಾವುದೇ ರೀತಿಯಾದಂತಹ ಮಧ್ಯವರ್ತಿಗಳಿಲ್ಲದೆ ನೇರವಾಗಿ ರೈತರ ಖಾತೆಗಳಿಗೆ ಜಮಾ ಆಗುತ್ತಾ ಇತ್ತು.
ಅದೇ ರೀತಿಯಾಗಿ ಈಗ ಇಲ್ಲಿಯವರೆಗೂ ಈ ಒಂದು ಯೋಜನೆ ಮೂಲಕ ಈಗಾಗಲೇ ಪ್ರತಿಯೊಬ್ಬ ರೈತರು ಕೂಡ 19 ಕಂತಿನ ಹಣವನ್ನು ಈಗಾಗಲೇ ಪಡೆದುಕೊಂಡಿದ್ದಾರೆ. ಈಗ ಆಗಸ್ಟ್ 2ನೇ ತಾರೀಕಿನಂದು ಈ ಒಂದು 20ನೇ ಕಂತಿನ ಹಣವು ಕೂಡ ಈಗ ಪ್ರತಿಯೊಬ್ಬರಿಗೂ ಕೂಡ ಜಮಾ ಆಗಿದೆ ಇಲ್ಲವೇ ಎಂಬುದನ್ನು ಈ ರೀತಿಯಾಗಿ ತಿಳಿದುಕೊಳ್ಳಿ.
ಹಣವನ್ನು ಚೆಕ್ ಮಾಡುವುದು ಹೇಗೆ?
- ಮೊದಲಿಗೆ ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಆನಂತರ ನೀವು ಅದರಲ್ಲಿ ಬೆನಿಫಿಸಿರಿ ಸ್ಟೇಟಸ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ನಂತರ ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯನ್ನು ನೀವು ಅಲ್ಲಿ ಎಂಟರ್ ಮಾಡಬೇಕಾಗುತ್ತದೆ.
- ತದನಂತರ ನೀವು ಗೆಟ್ ಡೇಟಾ ಮೇಲೆ ಕ್ಲಿಕ್ ಮಾಡಿ. ನಿಮ್ಮ ಸ್ಥಿತಿಯನ್ನು ನೀವು ಪರಿಶೀಲನೆ ಮಾಡಿಕೊಳ್ಳಬಹುದು.
ಈಗ ನೀವು ಈ ಮೇಲೆ ತಿಳಿಸಿರುವಂತಹ ಹಂತಗಳನ್ನು ಪಾಲಿಸಿ ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಿಕೊಂಡು ಕೂಡಲೇ ನಿಮ್ಮ ಖಾತೆಗೆ ಈ ಒಂದು ಪಿಎಂ ಕಿಸಾನ್ ಯೋಜನೆಯ ಹಣವು ಬಾರದೆ ಇದ್ದರೆ ನೀವು ತಕ್ಷಣ ನಿಮ್ಮ ಬ್ಯಾಂಕ್ ಖಾತೆ NPCI ಮ್ಯಾಪಿಂಗ್ ಆಗಿದೆ, ಇಲ್ಲವೇ ಎಂಬುದನ್ನು ಒಂದು ಬಾರಿ ಚೆಕ್ ಮಾಡಿಕೊಳ್ಳಿ. ಆನಂತರ ನಿಮ್ಮ ಆಧಾರ್ ಕಾರ್ಡ್ KYC ಆಗಿದೆ ಇಲ್ಲವೇ ಎಂಬುದರ ಬಗ್ಗೆ ನೀವು ಒಂದು ಬಾರಿ ಚೆಕ್ ಮಾಡಿಕೊಂಡು ಒಂದು ವೇಳೆ ಅವುಗಳು ಆಗದೆ ಇದ್ದರೆ ಅವುಗಳನ್ನು ಕೂಡಲೇ ಮಾಡಿಸಿಕೊಳ್ಳಿ. ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ರೈತರು ಕೂಡ ಈ ಒಂದು ಹಣ ಜಮಾ ಆಗುತ್ತದೆ.