E Swatu Gram Panchayata: ಈಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ತಿಗಳು ಕೂಡ ಈ ಸ್ವತ್ತು! ಸರ್ಕಾರದಿಂದ ಮತ್ತೊಂದು ಹೊಸ ಆದೇಶ!
ಈಗ ಸ್ನೇಹಿತರೆ ಇನ್ನು ಮುಂದೆ ನಿಮ್ಮ ಗ್ರಾಮ ಪಂಚಾಯತಿಗಳಲ್ಲಿ ಅಂದರೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವಂತ ಎಲ್ಲಾ ಆಸ್ತಿಗಳು ಕೂಡ ಈ ಸ್ವತ್ತು ಪ್ರಕಾರ ಇನ್ನು ಮುಂದೆ ಎಲ್ಲರಿಗೂ ಕೂಡ ಡಿಜಿಟಲ್ ದಾಖಲೆಗಳನ್ನು ನೀಡಲಾಗುತ್ತದೆ. ಇದರಿಂದ ನಾನ ಬಗೆಯ ವಿವಾದಗಳು ಹಾಗೂ ದಾಖಲೆಗಳ ಕೊರತೆ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.
ಈಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಬಡಾವಣೆಗಳು ಮತ್ತು ಮನೆಗಳು ಹಾಗೂ ಖಾಲಿ ನಿವಾಸಗಳು ಅಷ್ಟೇ ಅಲ್ಲದೆ ಈಗ ನಿರ್ಮಾಣಗೊಂಡಿರುವ ಕಟ್ಟಡಗಳು ಕೂಡ ಇನ್ನು ಮುಂದೆ ಈ ಸ್ವತ್ತು ತಂತ್ರಾಂಶದಲ್ಲಿ ಪಿಐಡಿ ನಂಬರ್ ನೊಂದಿಗೆ ಈಗ ತೆರಿಗೆ ಪಾವತಿಯ ಪದ್ಧತಿಯನ್ನು ಕೂಡ ಸ್ಥಾಪನೆ ಮಾಡಲಾಗುತ್ತದೆ.
ಅದೇ ರೀತಿಯಾಗಿ ಈಗ ಈ ಒಂದು ಪಂಚತಂತ್ರ 2.0 ತಂತ್ರಾಂಶದಲ್ಲಿ ಸುಮಾರು 140 ಲಕ್ಷ ಆಸ್ತಿ ಈಗಾಗಲೇ ನೋಂದಾವಣೆ ಮಾಡಿಕೊಂಡಿವೆ. ಅದರಲ್ಲಿ 44 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಗೆ ಈಗ ಈ ಒಂದು ಈ ಸ್ವತ್ತುಗಳನ್ನು ನೀಡಲಾಗಿದೆ. ಇನ್ನುಳಿದಂತಹ 96 ಲಕ್ಷ ಆಸ್ತಿಗಳನ್ನು ಈ ಖಾತಾ ವಿತರಣೆಗೆ ತಯಾರಿಗಳು ಪೂರ್ಣಗೊಂಡಿವೆ. ಈಗ ನೀವು ಕೂಡ ಯಾವ ರೀತಿಯಾಗಿ ಈ ಸ್ವತ್ತು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂಬುದರ ಮಾಹಿತಿ ಇಲ್ಲಿದೆ.
ಯಾವ ಆಸ್ತಿಗಳಿಗೆ ಈ ಸ್ವತ್ತು ದೊರೆಯುತ್ತದೆ
- ಈಗ ನೀವೇನಾದರೂ ಅಕ್ರಮ ಲೇಔಟ್ ನಲ್ಲಿ ರಿಜಿಸ್ಟ್ರೇಷನ್ ಮಾಡಿರುವಂತಹ ಆಸ್ತಿಗಳು ಕೂಡ ಮಾಡಿಸಿಕೊಳ್ಳಬಹುದು.
- ಆನಂತರ ನೀವು ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿಯನ್ನು ಮಾಡಿಕೊಂಡ ಆಸ್ತಿಗಳನ್ನು ಕೂಡ ಈ ಸ್ವತ್ತು ಮಾಡಿಸಿಕೊಳ್ಳಬಹುದು.
- ಆನಂತರ ಮೂಲ ಅಕ್ರಮ ಸೈಟ್ ಹೊಂದಿರುವಂತಹ ಬಡಾವಣೆಗಳ ಕೂಡ ಈ ಸ್ವತ್ತು ಅರ್ಜಿ ಸಲ್ಲಿಸಬಹುದು.
- ಆನಂತರ ಕಂದಾಯ ಭೂಮಿಯಲ್ಲಿ ನಿರ್ಮಾಣಗೊಂಡಿರುವ ಮನೆಗಳಾಗಿರಬಹುದು ಅಥವಾ ಕಟ್ಟಡಗಳ ಈ ಸ್ವತ್ತುಗಳನ್ನು ಅರ್ಜಿ ಸಲ್ಲಿಸಬಹುದು.
- ಆನಂತರ ಈ ಒಂದು ಭೂ ಪರಿವರ್ತತ ಕೃಷಿ ಭೂಮಿಯಲ್ಲಿ ಕೂಡ ನಿರ್ಮಾಣವಾದ ಬಡಾವಣೆಗಳಿಗೂ ಕೂಡ ಈ ಸ್ವತ್ತು ಅರ್ಜಿ ಸಲ್ಲಿಸಬಹುದು.
ಬೇಕಾಗುವ ದಾಖಲೆಗಳು ಏನು?
- ಭೂ ಪರಿವರ್ತನೆಯ ಆದೇಶ
- ಬಡಾವಣೆ ವಿನ್ಯಾಸದ ಆದೇಶ
- ನಿವೇಶನ ಬಿಡುಗಡೆ ಪತ್ರ
- ಪಹಣಿ
- ವಿದ್ಯುತ್ ಬಿಲ್
- ತೆರಿಗೆ ಪಾವತಿಸಿದ ರಸೀದಿ
- ನೊಂದಾಯಿತ ಪ್ರಮಾಣ ಪತ್ರ
ಈಗ ನೀವು ಕೂಡ ಈ ಒಂದು ಈ ಸ್ವತ್ತು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ನಾವು ಈ ಮೇಲೆ ತಿಳಿಸುವ ಪ್ರತಿಯೊಂದು ದಾಖಲೆಗಳನ್ನು ತೆಗೆದುಕೊಂಡು ನೀವು ಕೂಡ ಈ ಖಾತಾವನ್ನು ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸಲು ಸರ್ಕಾರದ ಶರತ್ತುಗಳು ಏನು?
ಈಗ ಸರ್ಕಾರವು ನೀಡುವಂತಹ ಈ ಸ್ವತ್ತು ವಿತರಣೆ ವೇಳೆ ಕೆಲವೊಂದು ನಿರ್ಬಂಧಗಳನ್ನು ಈಗ ವಿಧಿಸಿದೆ.. ಈಗ ಸರ್ಕಾರಿ ಅರಣ್ಯ ಶಾಸನಬದ್ಧ ಸಂಸ್ಥೆಗಳಿಗೆ ಭೂಮಿಗೆ ಈಗ ಈ ಖಾತ ದೊರೆಯುವುದಿಲ್ಲ. ಅದೇ ರೀತಿಯಾಗಿ ಸಾರ್ವಜನಿಕ ಉದ್ದೇಶದ ಸಿ ಎ ಸೈಟು ಹಾಗೂ ಉದ್ಯಾನವನಗಳ ಸ್ಥಳಗಳನ್ನು ಈಗ ಪಂಚಾಯಿತಿಗಳಿಗೆ ಉಚಿತವಾಗಿ ವರ್ಗಾವಣೆಯನ್ನು ಮಾಡಬೇಕಾಗುತ್ತದೆ.
ಆನಂತರ ಲೇಔಟ್ ಪ್ಲಾನ್ ಅನುಮೋದನೆ ಇಲ್ಲದಿದ್ದರೂ ಕೂಡ ಮೂಲಭೂತ ಸೌಕರ್ಯ ಇದ್ದರೆ ಮಾತ್ರ ಈ ಒಂದು ಈ ಖಾತಾ ನೀವು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಕೇವಲ ಒಂದೇ ಖಾತ ಆಧಾರದ ಮೇಲೆ ಮಾರಾಟವಾದಂತಹ ಆಸ್ತಿಗಳಿಗೂ ಕೂಡ ಸರ್ಕಾರ ಅವಕಾಶವನ್ನು ನೀಡಿದೆ.
ಅದೇ ರೀತಿಯಾಗಿ ಈ ಒಂದು ಯೋಜನೆಯ ಬಗ್ಗೆ ಯಾವುದೇ ಅನುಮಾನ ದಾಖಲೆ ಸಮಸ್ಯೆ ಅಥವಾ ಅರ್ಜಿ ಸಲ್ಲಿಸಬೇಕಾದರೆ ಈಗ ನೀವು ನಿಮ್ಮ ತಾಲೂಕು ಪಂಚಾಯತ್ ಅಥವಾ ಗ್ರಾಮ ಪಂಚಾಯತಿಗಳನ್ನು ಭೇಟಿ ನೀಡಿ. ಅಲ್ಲಿ ಸಂಪೂರ್ಣ ಮಾಹಿತಿ ಪಡೆಯಬಹುದು.
ಈ ಸ್ವತ್ತು ಪಡೆಯಲು ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ಸ್ನೇಹಿತರೆ ಆಸ್ತಿಯ ಮಾಲೀಕರು ತಮ್ಮ ಪೂರಕ ದಾಖಲೆಗಳೊಂದಿಗೆ ಈಗ ಗ್ರಾಮ ಪಂಚಾಯಿತಿಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಆನಂತರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅರ್ಜಿಯನ್ನು ಪರಿಶೀಲನೆ ಮಾಡಿ ಡಿಜಿಟಲ್ ಸಹಿ ಸಮೇತ ಈ ಒಂದು ಈ ಖಾತಾ ತಯಾರಿಸುತ್ತಾರೆ.
ಆನಂತರ ನಿಮ್ಮ ಅರ್ಜಿಯನ್ನು ಪಂಚಾಯಿತಿ ಅಧ್ಯಕ್ಷರ ಅನುಮೋದನೆಗೆ ತೆಗೆದುಕೊಂಡು ಅವರು ಮೂರು ದಿನದೊಳಗೆ ಅನುಮೋದನೆಯನ್ನು ನೀಡಬೇಕಾಗಿದ್ದು ವಿಳಂಬವಾದರೆ ಕಾರ್ಯನಿರ್ವಾಹಕ ಅಧಿಕಾರಿ ಅನುಮೋದನೆಯನ್ನು ನೀಡಲು ಈಗ ನಿಯಮ ಇದೆ ಎಂದು ಈಗ ಸರ್ಕಾರ ಮಾಹಿತಿ ನೀಡಿದೆ. ಈಗ ನಾವು ಈ ಮೇಲೆ ತಿಳಿಸಿರುವ ಮಾಹಿತಿ ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಈಗ ಈ ಸ್ವತ್ತು ಖಾತೆಯನ್ನು ಪಡೆದುಕೊಳ್ಳಬಹುದು.