Pradhan Mantri Krushi Sinchayi Yojana: ಹನಿ ನೀರಾವರಿ ಅಳವಡಿಕೆಗೆ ಸರಕಾರದಿಂದ ಭರ್ಜರಿ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.
ಈಗ ನಮ್ಮ ಭಾರತವು ಪ್ರಧಾನವಾಗಿ ಕೃಷಿ ಆಧಾರಿತ ದೇಶವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಕೃಷಿ ಚಟುವಟಿಕೆಗಳಿಗೆ ಬಹುಪಾಲು ರೈತರು ಕೃತಕ ನೀರಾವರಿ ಮೂಲಗಳನ್ನು ಅವಲಂಬಿಸಿದ್ದಾರೆ. ಅದೇ ರೀತಿಯಾಗಿ ಈ ಒಂದು ಹಿನ್ನೆಲೆಯಲ್ಲಿ ಪ್ರತಿ ಹನಿಗೂ ಕೂಡ ಹೆಚ್ಚಿನ ಬೆಳೆ ಎಂಬ ಮಹತ್ವದ ಪರಿಕಲ್ಪನೆಯೊಂದಿಗೆ ಈಗ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಕೃಷಿ ಸಿಂಚಾಯಿ ಯೋಜನೆಯ ಜಾರಿಗೆ ಮಾಡಿದೆ. ಈಗ ಈ ಒಂದು ಯೋಜನೆ ಅಡಿ ಕೃಷಿ ಭೂಮಿಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ ವ್ಯವಸ್ಥೆಗಳನ್ನು ಅಳವಡಿಕೆ ಮಾಡಲು ಸರ್ಕಾರವು ಸಹಾಯಧನವನ್ನು ನೀಡುತ್ತಾ ಇದೆ.
ಈಗ ಈ ಒಂದು ಯೋಜನೆಯನ್ನು 2015 ಜುಲೈ 1ರಂದು ಪ್ರಾರಂಭ ಮಾಡಲಾಯಿತು.ಇದರ ಮುಖ್ಯ ಉದ್ದೇಶವು ಏನೆಂದರೆ ಈಗ ಸೂಕ್ಷ್ಮ ನೀರಾವರಿ ತಂತ್ರಜ್ಞಾನಗಳ ಮೂಲಕ ಕಡಿಮೆ ನೀರನ್ನು ಬಳಕೆ ಮಾಡಿಕೊಂಡು ಕೃಷಿ ಉತ್ಪಾದನೆಯನ್ನು ಹೆಚ್ಚಿಗೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ, ಇದೇ ರೀತಿಯ ಎಲ್ಲ ಮಾಹಿತಿಗಾಗಿ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.
ಯೋಜನೆಯ ಉದ್ದೇಶಗಳು ಏನು?
ಈಗ ಈ ಒಂದು ಯೋಜನೆಯನ್ನು ಜಾರಿಗೆಗೊಳಿಸುವ ಮುಖ್ಯ ಉದ್ದೇಶವು ಏನೆಂದರೆ ನೀರಿನ ಸಮರ್ಪಕ ನಿರ್ವಹಣೆಯ ಮೂಲಕ ಬೆಳೆಗಳ ಉತ್ಪಾದನೆಯನ್ನು ಮತ್ತು ರೈತರ ಆದಾಯವನ್ನು ಹೆಚ್ಚಿಗೆ ಮಾಡುವುದು ಈ ಒಂದು ಯೋಜನೆಯ ಉದ್ದೇಶವಾಗಿದೆ.
ಆನಂತರ ಕಬ್ಬು, ಬಾಳೆ, ಹತ್ತಿ ಮುಂತಾದ ಹೆಚ್ಚು ನೀರು ಬೆಡುವಂತಹ ಬೆಳೆಗಳಿಗೆ ಈಗ ಸೂಕ್ಷ್ಮ ನೀರಾವರಿ ತಂತ್ರಜ್ಞಾನ ಅಳವಡಿಕೆ ಮಾಡಲು ಪ್ರೋತ್ಸಾಹ ನೀಡುತ್ತದೆ.
ಈಗ ನೀರಿನ ಕೊರತೆ ಇರುವಂತಹ ಪ್ರದೇಶಗಳಲ್ಲಿ ಈಗ ಅಂತರ್ಜಲ ಅಭಿವೃದ್ಧಿ ಮತ್ತು ಸೂಕ್ಷ್ಮ ನೀರಾವರಿ ಬಳಕೆಗೆ ಬಗ್ಗೆ ರೈತರಿಗೆ ಜಾಗೃತಿಯನ್ನು ಮೂಡಿಸುವುದು ಈ ಯೋಜನೆ ಉದ್ದೇಶ.
ಹಾಗೆ ಕೃಷಿಯಲ್ಲಿ ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸುವುದು ಮತ್ತು ಆಧುನಿಕ ಕೃಷಿ ತಂತ್ರಜ್ಞಾನಗಳ ಬಗ್ಗೆ ಅರಿವನ್ನು ಮೂಡಿಸುವುದು.
ಯಾರೆಲ್ಲ ಅರ್ಹರು!
- ಈಗ ನಮ್ಮ ಕರ್ನಾಟಕ ಸೇರಿದಂತೆ ನಮ್ಮ ದೇಶದಲ್ಲಿರುವ ಎಲ್ಲಾ ರಾಜ್ಯಗಳ ರೈತರು ಕೂಡ ಈ ಒಂದು ಯೋಜನೆಗೆ ಅರ್ಹರು.
- ಯಾವುದೇ ಜಾತಿ ಅಥವಾ ಸಮುದಾಯದ ನಿರ್ಬಂಧಗಳು ಇಲ್ಲದೆ ಈಗ ಎಲ್ಲಾ ವರ್ಗದ ರೈತರು ಕೂಡ ಸಹಾಯಧನವನ್ನು ಪಡೆದುಕೊಳ್ಳಬಹುದು.
- ಈ ಒಂದು ಯೋಜನೆ ಅಡಿಯಲ್ಲಿ ಈಗ ಗರಿಷ್ಠ 5 ಎಕರೆಗಳವರೆಗೆ ಇರುವಂತಹ ರೈತರು ಮಾತ್ರ ಸಹಾಯಧನವನ್ನು ಪಡೆದುಕೊಳ್ಳಬಹುದು.
ಈ ಯೋಜನೆಯ ಪ್ರಯೋಜನ ಮತ್ತು ಸಹಾಯಧನದ ಮಾಹಿತಿ
ಈಗ ಈ ಒಂದು ಸೂಕ್ಷ್ಮ ನೀರಾವರಿ ಯೋಜನೆಯ ಮುಖ್ಯ ಪ್ರಯೋಜನವು ಏನೆಂದರೆ ಈಗ ನೀರಾವರಿ ಘಟಕಗಳನ್ನು ಅಳವಡಿಸಿ ರೈತರಿಗೆ ಹಣಕಾಸಿನ ನೆರವನ್ನು ಒದಗಿಸುವುದು ಈ ಒಂದು ಯೋಜನೆಯ ಪ್ರಮುಖ ಪ್ರಯೋಜನವಾಗಿದೆ.
ಸಹಾಯಧನದ ಪ್ರಮಾಣದ ಮಾಹಿತಿ
ಈಗ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 55% ಅಷ್ಟು ಸಹಾಯಧನವನ್ನು ನೀಡಲಾಗುತ್ತದೆ. ಆನಂತರ ಇತರ ರೈತರಿಗೆ ಈಗ 45% ಅಷ್ಟು ಸಹಾಯಧನವನ್ನು ನೀಡಲಾಗುತ್ತದೆ. ಹಾಗೆ ಈಗ ಸಹಾಯಧನದ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಹಾಗೆ ರೈತರು ಈ ಒಂದು ಯೋಜನೆಗಳೊಂದಿಗೆ ಮಳೆ ನೀರು ಕೊಯ್ಲು, ನೀರು ಪಂಪ ಮಾಡುವ ಸಾಧನಗಳು ಮತ್ತು ಕೃಷಿ ಹೊಂಡ ನಿರ್ಮಾಣಕ್ಕೂ ಕೂಡ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಅಗತ್ಯ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆಯ ವಿವರ
- ಇತ್ತೀಚಿನ ಭಾವಚಿತ್ರ
- ರಾಜ್ಯದಲ್ಲಿ ವಾಸಿಸುವ ಪ್ರಮಾಣ ಪತ್ರ
ಅರ್ಜಿಯನ್ನು ಸಲ್ಲಿಸುವುದು ಹೇಗೆ?
- ನಾವು ಈ ಕೆಳಗೆ ನೀಡಿರುವ ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಮೊದಲು ಭೇಟಿ ನೀಡಿ.
- LINK : Apply Now
- ಆನಂತರ ಮುಖಪುಟದಲ್ಲಿ ಕಾಣುವಂತಹ ಮೈಕ್ರೋ ಇರ್ರಿಗೇಶನ್ ಅಪ್ಲಿಕೇಶನ್ ರಿಜಿಸ್ಟ್ರೇಷನ್ ಎಂಬುದರ ಮೇಲೆ ಕ್ಲಿಕ್ ಮಾಡಿ.
- ಆನಂತರ ಸೂಕ್ಷ್ಮ ನೀರಾವರಿ ಅರ್ಜಿ ನಮುನೆ ಪುಟ ತೆರೆದಾಗ ಅಲ್ಲಿ ನಿಮ್ಮ ಆಧಾರ್ ನಂಬರ್ ಅನ್ನು ಎಂಟರ್ ಮಾಡಿ. ಗೋ ಎಂಬುದರ ಮೇಲೆ ಕ್ಲಿಕ್ ಮಾಡಿ.
- ಆನಂತರ ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಬರುವ ಒಂದು ಒಟಿಪಿ ಎಂಟರ್ ಮಾಡಿ. verify ಅಂಡ್ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ.
- ಆನಂತರ ಮುಂದಿನ ಪುಟದಲ್ಲಿ ಕೇಳಿದಂತಹ ಪ್ರತಿಯೊಂದು ರೈತರ ಮಾಹಿತಿಗಳನ್ನು ಭರ್ತಿ ಮಾಡಿ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ.
- ಆನಂತರ ಒಂದು ಯೋಜನೆಗೆ ಸಂಬಂಧಿಸಿದೆ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ. Submit ಮೇಲೆ ಕ್ಲಿಕ್ ಮಾಡಿ.
ಈಗ ನಾವು ಈ ಮೇಲೆ ತಿಳಿಸಿರುವ ಹಂತಗಳನ್ನು ಪಾಲಿಸುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಲಾಭ ಪಡೆಯಬಹುದು. ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ಗಳಿಗೆ ಜಾಯಿನ್ ಆಗಿ.