Karnataka Jaati Ganati Started From 22/09/2025: ರಾಜ್ಯದಂತ ಜಾತಿ ಗಣತಿ ಸಮೀಕ್ಷೆ ನಡೆಸಲು ಸರ್ಕಾರದಿಂದ ಅಧಿಕೃತ ಆದೇಶ! ಸಪ್ಟೆಂಬರ್ 22 ರಿಂದ ಪ್ರಾರಂಭ!
ಈಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಬಹುನಿರೀಕ್ಷಿತ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆ ಈ ಹಿಂದೆ ನಿಗದಿ ಮಾಡಿದಂತ ದಿನಾಂಕದಂದು ನಡೆಯುವುದು ಈಗ ಖಚಿತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿರುವ ಪ್ರಕಾರ ಸಮೀಕ್ಷೆಯನ್ನು ಮುಂದೂಡಿಕೆ ಮಾಡದೆ ಈಗ ದಿನಾಂಕ 22/ 9/ 2025 ರಿಂದ 7/ 10/ 2025ರ ವರೆಗೆ ರಾಜ್ಯದ್ಯಂತ ಈಗ ಈ ಒಂದು ಸಮೀಕ್ಷೆಯನ್ನು ಕೈಗೊಳ್ಳಲು ಸರ್ಕಾರ ಅಧಿಕೃತ ಆದೇಶವನ್ನು ನೀಡಿದೆ. ಈ ರೀತಿಯ ಎಲ್ಲ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಿ.
ಸರ್ಕಾರದ ಅನುಮೋದನೆ ಮತ್ತು ನಿರ್ಧಾರದ ಮಾಹಿತಿ
ಈಗ ರಾಜ್ಯ ಸರ್ಕಾರವು ಈ ಕುರಿತು ನಡವಳಿಕೆಯನ್ನು ಬಿಡುಗಡೆ ಮಾಡಿದ್ದು ಅಂದರೆ ಆದೇಶ ಪತ್ರವನ್ನು ಬಿಡುಗಡೆ ಮಾಡಿದ್ದು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಈಗ ನಮ್ಮ ರಾಜ್ಯದ ಎಲ್ಲಾ ನಾಗರಿಕ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಯನ್ನು ನಡೆಸಲು ಈಗ ಅನುಮೋದನೆಯನ್ನು ನೀಡಲಾಗಿದೆ. ಹಾಗೆಯೇ ಆಯೋಗದ ಅಧ್ಯಕ್ಷರು ಈ ಒಂದು ಸಮೀಕ್ಷಾ ಕಾರ್ಯವನ್ನು ನಿರ್ದಿಷ್ಟ ದಿನಾಂಕಗಳನ್ನು ಕೈಗೊಳ್ಳಲು ಈಗ ಉದ್ದೇಶ ಹೊಂದಿದ್ದು. ಈ ಬಗ್ಗೆ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಪ್ರಾರಂಭ ಮಾಡಲಾಗಿದೆ.
ಹಾಗೆ ಈಗ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವಿಡಿಯೋ ಕಾನ್ಫರೆನ್ಸ್ ನ ಮೂಲಕ ಈಗ ನಿರ್ದೇಶನವನ್ನು ನೀಡಲಾಗಿದೆ.
ಆನಂತರ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮೀಕ್ಷಾದಾರರ ಜೊತೆಗೆ ಅಗತ್ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಅದೇ ರೀತಿಯಾಗಿ ಈಗ ಆಯೋಗದ ಪ್ರಸ್ತಾವನೆಯನ್ನು ಕುಲಂಕುಶವಾಗಿ ಪರಿಶೀಲಿಸಿದ ನಂತರ ಈಗ ಸರ್ಕಾರವು 22 9 2025 ರಿಂದ 7/ 10/ 2025ರವರೆಗೆ ಈಗ ಈ ಒಂದು ಸಮೀಕ್ಷೆಯನ್ನು ರಾಜ್ಯಾದ್ಯಂತ ಕೈಗೊಳ್ಳಲು ಅನುಮೋದನೆಯನ್ನು ನೀಡಲಾಗಿದೆ. ಅದೇ ರೀತಿಯಾಗಿ ಈಗ ಈ ಒಂದು 22 ನೇ ತಾರೀಖಿನಿಂದ ಈ ಒಂದು ಸಮೀಕ್ಷೆ ಪ್ರಾರಂಭವಾಗುವುದು ಖಚಿತವಾಗಿದೆ.ಇದೆ ತರದ ಮಾಹಿತಿ ತಿಳಿಯಲು ನಮ್ಮ ಮಾಧ್ಯಮದ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಗ್ರೋಪ್ ಗೆ ಜಾಯಿನ್ ಆಗಿ.