Heavy Rain Alert In Karnataka: ಕರ್ನಾಟಕದಲ್ಲಿ 20ಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 24ರ ವರೆಗೆ ಮಳೆ! ಇಲ್ಲಿದೆ ನೋಡಿ ಮಾಹಿತಿ.
ಈಗಾಗಲೇ ಸ್ನೇಹಿತರೇ ನಮ್ಮ ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಮಳೆ ಈಗ ಕಡಿಮೆಯಾಗುವ ಸಾಧ್ಯತೆ ಇಲ್ಲ. ಅಷ್ಟೇ ಅಲ್ಲದೆ ಈಗ ನಮ್ಮ ರಾಜ್ಯದಂತ ಮಳೆ ಚಟುವಟಿಕೆಗಳು ಈಗಾಗಲೇ ಮುಂದುವರೆದಿದೆ ಮತ್ತು ಹವಾಮಾನ ಇಲಾಖೆಯು ಸೆಪ್ಟೆಂಬರ್ 24ರ ವರೆಗೆ ಈಗ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಈಗ ಸಾಧಾರಣ ಮಳೆ ಮತ್ತು ಭಾರಿ ಮಳೆ ಆಗಬಹುದು ಎಂಬ ಮುನ್ಸೂಚನೆಯನ್ನು ನೀಡಿದೆ.
ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ಹವಾಮಾನ ಇಲಾಖೆಯ ಪ್ರಕಾರ ಈಗ ಬೀದರ್, ಕಲಬುರ್ಗಿ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಕೋಲಾರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಗೆ ಈಗ ಎಲ್ಲೋ ಅಲರ್ಟ ಅನ್ನು ನೀಡಲಾಗಿದೆ.
ಅಷ್ಟೇ ಅಲ್ಲದೆ ಈಗ ವಿಜಯನಗರ, ಶಿವಮೊಗ್ಗ, ರಾಮನಗರ, ಕೊಡಗು, ಹಾಸನ, ಮಂಡ್ಯ, ಮೈಸೂರು, ದಾವಣಗೆರೆ, ಚಾಮರಾಜನಗರ, ಚಿಕ್ಕಮಂಗಳೂರು, ಬೆಂಗಳೂರು ಗ್ರಾಮಾಂತರ, ಯಾದಗಿರಿ, ಕೊಪ್ಪಳ, ಹಾವೇರಿ, ಗದಗ, ಬೆಂಗಳೂರು ನಗರ, ರಾಯಚೂರು, ಧಾರವಾಡ ಮತ್ತು ಬೆಳಗಾವಿ ಸೇರಿದಂತೆ ಈಗ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿಯನ್ನು ನೀಡಿದೆ.
ಬೆಂಗಳೂರಿನ ಹವಾಮಾನದ ಮಾಹಿತಿ
ಈಗ ಸ್ನೇಹಿತರೆ ನಮ್ಮ ರಾಜಧಾನಿ ನಗರ ವಾದಂತಹ ಬೆಂಗಳೂರಿನಲ್ಲಿ ಬುಧವಾರ ರಾತ್ರಿಯಿಂದಲೂ ಕೂಡ ಮಳೆ ಸಂಭವಿಸಿದ್ದು. ನಗರದ ವಿವಿಧ ಭಾಗಗಳಲ್ಲಿ ಉಷ್ಣಾಂಶದಲ್ಲಿ ಸ್ವಲ್ಪ ವ್ಯತ್ಯಾಸಗಳು ಕಂಡುಬಂದಿವೆ. ಅದೇ ರೀತಿಯಾಗಿ ಈಗ ಈ ಒಂದು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯ ಮಾಹಿತಿಯನ್ನು ನೀಡಿದೆ.
ಕರಾವಳಿ ಪ್ರದೇಶದ ಹವಾಮಾನ
ಅದೇ ರೀತಿಯಾಗಿ ಈಗ ನಮ್ಮ ಕರಾವಳಿ ಪ್ರದೇಶಗಳಲ್ಲಿ ಸಹ ತಂಪಾದ ಮತ್ತು ಸಾಂಧ್ರತೆ ಹವಾಮಾನ ಇದೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಅದೇ ರೀತಿಯಾಗಿ ಈಗ ಹೊನ್ನಾವರ, ಮಂಗಳೂರು, ಶಕ್ತಿನಗರ, ಕಾರವಾರ ಜಿಲ್ಲೆಗಳಲ್ಲಿ 23 ಡಿಗ್ರಿ ಸೆಲ್ಸಿಯಸ್ ನಿಂದ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ನವರಿಗೆ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯ ಮಾಹಿತಿಯನ್ನು ನೀಡಿದೆ.
ಈಗಾಗಲೇ ಸ್ನೇಹಿತರೆ ಈಗ ನಮ್ಮ ರಾಜ್ಯದಲ್ಲಿ ಇನ್ನೂ ಹಲವಾರು ದಿನಗಳ ಕಾಲ ಈ ಒಂದು ಮಳೆ ಸದ್ದು ಮಾಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯೂ ಸ್ಪಷ್ಟ ಮಾಹಿತಿಯನ್ನು ನೀಡಿದೆ. ಆದಕಾರಣ ಈಗ ನೀವೇನಾದರೂ ಬೇರೆ ಕಡೆಗೆ ಪ್ರವಾಸವನ್ನು ಕೈಗೊಂಡಿದ್ದರೆ ಈಗ ಒಂದು ಬಾರಿ ಯೋಚನೆ ಮಾಡಿ ಪ್ರವಾಸವನ್ನು ಕೈಗೊಳ್ಳುವುದು ಉತ್ತಮ.
ಅಷ್ಟೇ ಅಲ್ಲದೆ ಈಗ ನೀವು ಕೆಲವೊಂದು ಸಮಯದಲ್ಲಿ ನೀವು ಈಗ ನೀರಿನಿಂದ ದೂರ ಇರಬೇಕು ಏಕೆಂದರೆ ಪ್ರವಾಹಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಇದು ಈಗ ಜನರಿಗೆ ಮುನ್ನೆಚ್ಚರಿಕೆ ಕ್ರಮ ಎಂದು ಹೇಳಿದರೆ ತಪ್ಪಾಗದು. ಅದೇ ರೀತಿಯಾಗಿ ನಿಮ್ಮ ಹತ್ತಿರ ಇರುವಂತಹ ವಿದ್ಯುತ್ ಕಂಬಗಳ ಸನಿವೊಕೂಡ ನೀವು ಹೋಗದಿರುವುದು ಉತ್ತಮ.
ಯಾಕೆಂದರೆ ಕೆಲವೊಂದು ಬಾರಿ ವಿದ್ಯುತ್ತಿನಲ್ಲಿ ಆಗುವಂತ ಏರುಪೇರುಗಳ ಮೂಲಕ ಸಾವು ಕೂಡ ಸಂಭವಿಸಬಹುದು. ಆದ ಕಾರಣ ಮಳೆ ಆಗುವ ಸಂದರ್ಭದಲ್ಲಿ ನೀವು ಸ್ವಲ್ಪ ಎಚ್ಚರಿಕೆ ವಹಿಸುವುದು ಉತ್ತಮವಾಗಿರುತ್ತದೆ. ಅದೇ ರೀತಿಯಾಗಿ ದಿನನಿತ್ಯ ಇಂತಹ ಮಾಹಿತಿ ತಿಳಿಯಲು ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.