PM Surya Ghar Yojane In Free Solar Scheme: ನಿಮ್ಮ ಮನೆಗೆ ಪಿಎಂ ಸೂರ್ಯ ಘರ ಯೋಜನೆಯ ಉಚಿತ ಸೋಲಾರ್ ಪಡೆಯುವುದು ಹೇಗೆ?ಇಲ್ಲಿದೆ ನೋಡಿ ಮಾಹಿತಿ.
ಈಗ ಕೇಂದ್ರ ಸರ್ಕಾರದ ಕಡೆಯಿಂದ ನಮ್ಮ ದೇಶದಲ್ಲಿ ಇರುವಂತ ಜನರಿಗೆ ಉಚಿತ ವಿದ್ಯುತ್ ನೀಡುವ ಉದ್ದೇಶದಿಂದಾಗಿ ಈಗ ಜಾರಿಗೆ ಮಾಡಿರುವಂತಹ ಈ ಒಂದು ಪ್ರಧಾನಮಂತ್ರಿ ಸೂರ್ಯ ಘರ ಯೋಜನೆಯಿಂದ ಈಗ ಉಚಿತ ವಿದ್ಯುತ್ ಅನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಈಗ ಈ ಒಂದು ಯೋಜನೆಯ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳಿ.
ಈಗ ಈ ಒಂದು ವಿದ್ಯುತ್ ಉಳಿಸುವ ಸಲುವಾಗಿ ಕೇಂದ್ರ ಸರ್ಕಾರವು ಜಾರಿಗೆ ಮಾಡಿರುವಂತ ಹೊಸ ಯೋಜನೆ ಎಂದರೆ ಅದು ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಈ ಒಂದು ಯೋಜನೆ ಮುಖ್ಯ ಉದ್ದೇಶ ಮತ್ತು ಗುರಿ ಈಗ ನಮ್ಮ ದೇಶದಲ್ಲಿ ಒಂದು ಕೋಟಿ ಮನೆಗಳಿಗೆ ಈಗ ಸೋಲಾರ್ ಘಟಕಗಳನ್ನು ಬಳಸಿಕೊಂಡು ಪರಿಸರ ಸ್ನೇಹಿತ ಉತ್ಪಾದನೆ ಮಾಡುವುದು ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.
ಹಾಗೆ ಈಗ ಈ ಒಂದು ಯೋಜನೆಯಲ್ಲಿ ಈಗ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈಗ 72,000 ಕೋಟಿ ಅಧಿಕ ವೆಚ್ಚದೊಂದಿಗೆ ಈಗ ಅನುಮೋದನೆಯನ್ನು ನೀಡಲಾಗಿದೆ. ಈಗ ನಮ್ಮ ದೇಶದಲ್ಲಿ ಸೋಲಾರ್ ವಿದ್ಯುತ್ ಅನ್ನು ಉತ್ಪಾದನೆ ಮಾಡುವುದು ಹಾಗೂ ಉಪಯೋಗಿಸುವುದರಲ್ಲಿ ಭಾರತವು ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿದೆ. ಹಾಗಿದ್ದರೆ ಈ ಒಂದು ಯೋಜನೆ ಲಾಭಗಳು ಏನು ಮತ್ತು ಎಷ್ಟು ರೂಪಾಯಿಗಳವರೆಗೆ ಸಹಾಯಧನ ಪಡೆಯಬಹುದು. ಹಾಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಹಾಗೂ ಅರ್ಹತೆಗಳು ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇದರಲ್ಲಿ ಇದೆ.
ಈ ಯೋಜನೆಯ ಮಾಹಿತಿ
ಈಗ ನೀವು ಈ ಒಂದು ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಈಗ ಪ್ರತಿ ಮನೆಗೂ ಕೂಡ 15,000ಗಳವರೆಗೆ ವಿದ್ಯುತ್ ಬಲ್ಲನ್ನು ಉಳಿತಾಯ ಮಾಡುವಂತಹ ಪರಿವರ್ತಕ ಯೋಜನೆಯಾಗಿದೆ ಎಂದು ಹೇಳಿದರೆ ತಪ್ಪಾಗದು. ಈಗ ಪ್ರತಿಯೊಬ್ಬರೂ ಕೂಡ ತಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಸ್ಥಾಪನೆ ಮಾಡಿ ವಿದ್ಯುತ್ ಉತ್ಪಾದನೆ ಮತ್ತು ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರೆ ತಪ್ಪಾಗದು. ಈಗ ಈ ಒಂದು ಯೋಜನೆ ಅಡಿಯಲ್ಲಿಯ ಪ್ರತಿ ಕುಟುಂಬಗಳಿಗೆ ಪ್ರತಿ ತಿಂಗಳು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ.
ಹಾಗೆ ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಿದಂತ ಅರ್ಹ ಫಲಾನುಭವಿಗಳಿಗೆ ಈಗ ತಮ್ಮ ಮನೆಯ ಮೇಲ್ಚಾವಣಿ ಮೇಲೆ ಸೌರವಿದ್ಯುತ್ ಘಟಕಗಳನ್ನು ಸ್ಥಾಪನೆ ಮಾಡಿಕೊಳ್ಳಲು ಕೇಂದ್ರ ಸರಕಾರದಿಂದ ಈಗ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಮತ್ತು ದೊರೆಯುತ್ತದೆ.
ಈಗ ಅರ್ಹ ಇರುವಂತಹ ಫಲಾನುಭವಿಗಳು ತಮ್ಮ ಮನೆಯ ಮೇಲ್ಚಾವಣಿಯ ಮೇಲೆ ಗರಿಷ್ಠ 10 ಕಿಲೋ ವ್ಯಾಟ್ ವಿದ್ಯುತ್ ಅನ್ನು ಉತ್ಪಾದನೆಗೆ ಅಗತ್ಯವಿರುವ ಸೌರ ಘಟಕಗಳನ್ನು ಸ್ಥಾಪನೆ ಮಾಡಿಕೊಂಡು ಕೇಂದ್ರ ಸರ್ಕಾರವು ನೀಡುವಂತಹ ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.
ಅಂತರ ನೀವು ಸೋಲಾರ್ ವಿದ್ಯುತ್ ಘಟಕವನ್ನು ಅಳವಡಿಕೆ ಮಾಡಿಕೊಂಡು 5 ವರ್ಷಗಳ ವರೆಗೆ ನಿರ್ವಹಣಾ ಗ್ಯಾರಂಟಿಯನ್ನು ನಿಮಗೆ ನೀಡಲಾಗುತ್ತದೆ.
ಹಾಗೆ ಈಗ ಈ ಒಂದು ಯೋಜನೆಗೆ ಅರ್ಹ ಫಲಾನುಭವಿಗಳು ಸೋಲಾರ್ ಘಟಕಗಳನ್ನು ಅಳವಡಿಕೆ ಮಾಡಿಕೊಂಡ ಮೇಲೆ ಯಾವುದೇ ರೀತಿಯಾದಂತಹ ಬಿಲ್ಲುಗಳನ್ನು ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ. ಹಾಗೆ ನೀವು ಹೆಚ್ಚಿಗೆ ಉದ್ಪಾದಿಸಿದಂತಹ ವಿದ್ಯುತ್ತನ್ನು ನಿಮ್ಮ ಹತ್ತಿರ ಇರುವಂತಹ ವಿದ್ಯುತ್ ಸರಬರಾಜು ಕಂಪನಿ ಗಳಿಗೆ ಮಾರಾಟ ಮಾಡಿ ಹೆಚ್ಚಿನ ಆದಾಯವನ್ನು ಗಳಿಸಬಹುದು.
ಅರ್ಹತೆಗಳು ಏನು?
- ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು.
- ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸು ಹೊಂದಿರಬೇಕು.
- ಅನಂತರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೋಲಾರ್ ವಿದ್ಯುತ್ ಘಟಕಗಳನ್ನು ಸ್ಥಾಪನೆ ಮಾಡಿಕೊಳ್ಳಲು ಸ್ವಂತ ಮನೆಯನ್ನು ಹೊಂದಿರಬೇಕು.
- ಹಾಗೆ ಅಭ್ಯರ್ಥಿಯು ತಮ್ಮ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ವೋಟರ್ ಐಡಿ
- ಆರು ತಿಂಗಳ ವಿದ್ಯುತ್ ಬಿಲ್
- ಬ್ಯಾಂಕ್ ಖಾತೆಯ ವಿವರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಸ್ವಂತ ಮನೆಗೆ ಸಂಬಂಧಿಸಿದ ದಾಖಲೆಗಳು
ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ?
ಈಗ ನೀವು ಕೂಡ ಈ ಒಂದು ಸೂರ್ಯ ಘರ್ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಮೊದಲು ಅವರು ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ಅದರಲ್ಲಿ ಭರ್ತಿ ಮಾಡಿಕೊಂಡು ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.