Atal Pension Scheme: ಈಗ ಪ್ರತಿ ತಿಂಗಳು 5,000 ಪಿಂಚಣಿ ಪಡೆಯಿರಿ. ಇಲ್ಲಿದೆ ನೋಡಿ ಸಂಪೂರ್ಣ ವಾದಂತಹ ಮಾಹಿತಿ.
ಈಗ ಈ ಒಂದು ಯೋಜನೆ ಮೂಲಕ ಈಗ ನೀವೇನಾದರೂ ಹಣವನ್ನು ಹೂಡಿಕೆ ಮಾಡಿದ್ದೆ ಆದರೆ ಈಗ ನೀವು ಪ್ರತಿ ತಿಂಗಳು ಕೂಡ 5000 ದವರೆಗೆ ಈಗ ಈ ಒಂದು ಯೋಜನೆ ಮೂಲಕ ಪಿಂಚಣಿಯನ್ನು ಪಡೆದುಕೊಳ್ಳಬಹುದು. ಈಗ ಈ ಒಂದು ಇಳಿ ವಯಸ್ಸಿನಲ್ಲಿ ಈಗ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದಾಗಿ ಈಗ ಕೇಂದ್ರ ಸರ್ಕಾರವು ಅನುಷ್ಠಾನಗೊಳಿಸಿರುವಂತಹ ಈ ಒಂದು ಅಟಲ್ ಪಿಂಚಣಿ ಯೋಜನೆ ಮೂಲಕ ನೀವು 5,000 ದವರೆಗೆ ಪ್ರತಿ ತಿಂಗಳು ಪಿಂಚಣಿಯನ್ನು ಈಗ ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ಈಗ ಕಳೆದ ಏಪ್ರಿಲ್ ಹೊತ್ತಿಗೆ ಈ ಒಂದು ಯೋಜನೆಯ ಮೂಲಕ ಈಗ 7.65 ಕೋಟಿಗೂ ಹೆಚ್ಚಿನ ಜನರು ನೋಂದಾವಣೆಯನ್ನು ಮಾಡಿಕೊಂಡಿದ್ದಾರೆ. ಒಟ್ಟಾರೆಯಾಗಿ ಈಗ 45,974 ಕೋಟಿ ರೂಪಾಯಿ ಈ ಒಂದು ಯೋಜನೆ ಮೂಲಕ ಸಂಗ್ರಹವಾಗಿದೆ. ಹಾಗಿದ್ದರೆ ಈ ಒಂದು ಯೋಜನೆ ನೋಂದಣಿ ಮತ್ತು ಯಾವ ರೀತಿಯಾಗಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಅಟಲ್ ಪಿಂಚಣಿ ಯೋಜನೆಯ ಮಾಹಿತಿ
ಈಗ ಈ ಒಂದು ಅಟಲ್ ಪಿಂಚಣಿ ಯೋಜನೆಯನ್ನು ಪ್ರಧಾನಮಂತ್ರಿ ಆದಂತಹ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಈಗ ಕೇಂದ್ರ ಸರ್ಕಾರವು ಈ ಒಂದು ಯೋಜನೆಯನ್ನು 2015 ಜೂನ್ ನಲ್ಲಿ ಆರಂಭ ಮಾಡಿದ್ದು. ಈಗ ಈ ಒಂದು ಯೋಜನೆಯ ಕಾರ್ಯನಿರ್ವಹಣೆಯ ಜವಾಬ್ದಾರಿ ಏನೆಂದರೆ, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಗಳನ್ನು ಹೊಂದಿದೆ. ಈಗ ಯಾರು ವೃದ್ಯಾಪದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಬಾರದೆಂಬ ಉದ್ದೇಶದಿಂದ ಈ ಒಂದು ಯೋಜನೆಯನ್ನು ಈಗ ಜಾರಿಗೆ ಮಾಡಲಾಗಿದೆ.
ಯಾರೆಲ್ಲಾ ಅರ್ಹರು
ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಮಹಿಳೆಯರು, ದಿನಗೂಲಿ ಕಾರ್ಮಿಕರು, ಶ್ರಮಿಕರು, ಖಾಸಗಿ ಉದ್ಯೋಗಿಗಳು ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಅದೇ ರೀತಿಯಾಗಿ ಈಗ 18 ರಿಂದ 40 ವರ್ಷದ ವಯಸ್ಸಿನ ಆದಾಯ ತೆರಿಗೆ ಪಾವತಿ ಮಾಡದೇ ಇರುವಂತಹ ಎಲ್ಲಾ ಪ್ರತಿಯೊಬ್ಬ ನಾಗರಿಕರು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಎಷ್ಟು ಪಾವತಿ ಮಾಡಿದರೆ ಎಷ್ಟು ಪಿಂಚಣಿಯನ್ನು ಪಡೆಯಬಹುದು
ಈಗ 18 ವಯಸ್ಸಿನಲ್ಲಿ ಯಾರೆಲ್ಲ ಈ ಒಂದು ಯೋಜನೆಗೆ ಸೇರ್ಪಡೆಗೊಳ್ಳುತ್ತಾರೋ ಅವರು 1000 ಪಿಂಚಣಿಗೆ ಈಗ ಪ್ರತಿ ತಿಂಗಳು 42 ರೂಪಾಯಿ ಹಾಗೂ 2000 ಪಿಂಚಣಿಗೆ 84 ರೂಪಾಯಿ ಆನಂತರ 3,000 ಪಿಂಚಣಿಗೆ 125 ರೂ. 4000 ಪಿಂಚಣಿಗೆ 168 ಹಾಗೆ 5000 ಪಿಂಚಣಿಗೆ 210 ರೂಪಾಯಿಗಳವರೆಗೆ ಪ್ರತಿ ತಿಂಗಳು ಹೂಡಿಕೆಯನ್ನು ಮಾಡಬೇಕಾಗುತ್ತದೆ.
ಆನಂತರ 40 ವಯಸ್ಸಿನಲ್ಲಿ ನೀವೇನಾದರೂ ಈ ಒಂದು ಯೋಜನೆಗೆ ಸೇರಿದೆ ಆದರೆ 1000 ಪಿಂಚಣಿ ಪಡೆಯಲು 291 ,2000 ಪಡೆಯಲು 582 ರೂಪಾಯಿ, 3000 ಪಡೆಯಲು 873 ರೂಪಾಯಿ, 4,000 ಪಿಂಚಣಿ ಪಡೆಯಲು 1,164, 5000 ಪಿಂಚಣಿಗೆ 1,454 ಪ್ರತಿ ತಿಂಗಳು ನೀವು ಹೂಡಿಕೆಯನ್ನು ಮಾಡಬೇಕಾಗುತ್ತದೆ.
ಅದೇ ರೀತಿಯಾಗಿ ಈಗ ಹೂಡಿಕೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಈ ಒಂದು ಯೋಜನೆಗೆ ಈಗ ಮಾಸಿಕವಾಗಿ ಅಥವಾ ತ್ರೈಮಾಸಿಕವಾಗಿ ಇಲ್ಲವೇ ಅರ್ಧ ವಾರ್ಷಿಕವಾಗಿ ನೀವು ಆಯ್ಕೆಗಳನ್ನು ಮಾಡಿಕೊಳ್ಳಬಹುದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಉಳಿತಾಯ ಖಾತೆ
- ಇತ್ತೀಚಿನ ಭಾವಚಿತ್ರ
ಪಿಂಚಣಿಯನ್ನು ಪಡೆಯುವುದು ಹೇಗೆ?
- ಈಗ ನೀವು ನಿಮಗೆ 60 ವರ್ಷ ತಲುಪಿದಾಗ ನೀವು ಆಯ್ಕೆ ಮಾಡಿದಂತಹ ಮೊತ್ತವನ್ನು ನೀವು ಮಾಸಿಕವಾಗಿ ಪಿಂಚಣಿ ರೂಪದಲ್ಲಿ ಪಡೆಯಬಹುದು.
- ಒಂದು ವೇಳೆ ಈಗ ಈ ಒಂದು ಗ್ರಾಹಕರು ನಿಧನವನ್ನು ಹೊಂದಿದರೆ ಅವರ ಸಂಗಾತಿಗೆ ಈ ಒಂದು ಪಿಂಚಣಿ ದೊರೆಯುತ್ತದೆ.
- ಒಂದು ವೇಳೆ ಸಂಗಾತಿಯು ಕೂಡ ನಿಧನವನ್ನು ಹೊಂದಿದರೆ ಪೂರ್ಣ ಪಿಂಚಣಿ ಹಣವನ್ನು ನಾಮಿನಿಗೆ ವರ್ಗಾವಣೆ ಮಾಡಲಾಗುತ್ತದೆ.
ಅರ್ಜಿಯನ್ನು ಸಲ್ಲಿಸುವುದು ಹೇಗೆ?
- ಈ ಒಂದು ಯೋಜನೆಗೆ ನೀವು ಕೂಡ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ನಿಮ್ಮ ಹತ್ತಿರ ಇರುವಂತಹ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಮೊದಲು ಭೇಟಿಯನ್ನು ನೀಡಬೇಕು.
- ಆನಂತರ ನೀವು ಅಟಲ್ ಪಿಂಚಣಿ ಯೋಜನೆಯ ಫಾರ್ಮನ್ನು ಪಡೆದುಕೊಳ್ಳಬೇಕು.
- ತದನಂತರ ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ನೀವು ಅದರಲ್ಲಿ ಭರ್ತಿ ಮಾಡಿ. ನಿಮ್ಮ ವೈಯಕ್ತಿಕ ದಾಖಲೆಗಳನ್ನು ನೀಡಬೇಕಾಗುತ್ತದೆ.
- ಆನಂತರ ನೀವು ನಿಮ್ಮ ಪಿಂಚಣಿ ಆಯ್ಕೆ ಮತ್ತು ಪಾವತಿ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಈಗ ನೀವೇನಾದರೂ ಈ ಒಂದು ಅಟಲ್ ಪಿಂಚಣಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಮೇಲೆ ತಿಳಿಸಿರುವ ಸಂಪೂರ್ಣ ವಾದಂತಹ ಮಾಹಿತಿಯನ್ನು ಕೊನೆಯವರೆಗೂ ಓದಿಕೊಂಡು ಈಗ ನೀವು ಕೂಡ ಈ ಒಂದು ಯೋಜನೆ ಅಡಿಯಲ್ಲಿ ಈಗ ಹೂಡಿಕೆಯನ್ನು ಮಾಡಿ. ಪ್ರತಿ ತಿಂಗಳು 5000 ದವರೆಗೆ ಪಿಂಚಣಿಯನ್ನು ಪಡೆದುಕೊಳ್ಳಬಹುದು. ಪ್ರತಿನಿತ್ಯ ಇಂತಹ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.