Students New Scholarship: 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ! ಈ ಕೂಡಲೇ ಅರ್ಜಿ ಸಲ್ಲಿಸಿ.
ಈಗ ಕರ್ನಾಟಕ ಸರ್ಕಾರ 2025 ಮತ್ತು 26 ನೇ ಸಾಲಿನಲ್ಲಿ 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳು ಅಂದರೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಈಗ ವಿದ್ಯಾರ್ಥಿ ವೇ.ತನವನ್ನು ನೀಡಲು ಅರ್ಜಿ ಸಲ್ಲಿಕೆ ಪ್ರಾರಂಭ ಮಾಡಿದೆ. ಈ ಒಂದು ಯೋಜನೆ ಅಡಿಯಲ್ಲಿ ಈಗ ಆರ್ಥಿಕವಾಗಿ ಹಿಂದುಳಿದಂತ ವರ್ಗದ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಉಚಿತ ಶಿಕ್ಷಣವನ್ನು ಪಡೆದುಕೊಳ್ಳಲು ಈಗ ಸಹಾಯಧನವನ್ನು ಪಡೆದುಕೊಳ್ಳಬಹುದು.
ಹಾಗಿದ್ದರೆ ಈಗ ಈ ಒಂದು ವಿದ್ಯಾರ್ಥಿ ವೇತನ ಏನು ಹಾಗೂ ಈ ಒಂದು ವಿದ್ಯಾರ್ಥಿ ವೇತನಕ್ಕೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ದಾಖಲೆಗಳು ಏನು ಹಾಗೂ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಗಾಗಿ ಒಂದು ಲೇಖನದಲ್ಲಿ ಇದೆ.
ಯಾರೆಲ್ಲ ಅರ್ಜಿಯನ್ನು ಸಲ್ಲಿಕೆ ಮಾಡಬಹುದು
- ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
- ಆನಂತರ ಅರ್ಜಿದಾರರು ಅಲ್ಪಸಂಖ್ಯಾತ ಸಮುದಾಯದ ವರ್ಗಕ್ಕೆ ಸೇರಿರಬೇಕು.
- ಹಾಗೆಯೇ ಕುಟುಂಬದ ವಾರ್ಷಿಕ ಆದಾಯವು 2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಆನಂತರ ಒಂದು ಅಭ್ಯರ್ಥಿಯು ಅಂದರೆ ವಿದ್ಯಾರ್ಥಿಯು 1ರಿಂದ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಇತ್ತೀಚಿನ ಭಾವಚಿತ್ರ
- ಮೊಬೈಲ್ ನಂಬರ್
- ಬ್ಯಾಂಕ್ ಖಾತೆಯ ವಿವರ
- ಶಾಲೆಯಿಂದ ಪಡೆದ ಪ್ರವೇಶ ಪತ್ರ
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವೇನಾದರೂ ಹೊಸದಾಗಿ ನೊಂದಣಿ ಮಾಡಿ ಕೊಳ್ಳಬೇಕೆಂದುಕೊಂಡಿದ್ದರೆ ರಿಜಿಸ್ಟರ್ ಅಂದರೆ ಹೊಸ ಬಳಕೆದಾರರನ್ನು ನೋಂದಾಯಿಸಿ ಮೇಲೆ ನೀವು ಕ್ಲಿಕ್ ಮಾಡಿ.
- ಆನಂತರ ನೀವು ಲಾಗಿನ್ ಮಾಡಿಕೊಂಡು ನಿಮಗೆ ನೋಂದಾಯಿಸಿದ ಮೊಬೈಲ್ ನಂಬರ್ ಮತ್ತು ಪಾಸ್ವರ್ಡ್ ಅನ್ನು ಎಂಟರ್ ಮಾಡಿ.
- ಆನಂತರ ನೀವು ಅದರಲ್ಲಿ ಒಂದು ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ.
- ತದನಂತರ ಆ ಒಂದು ಅರ್ಜಿ ನಮೂನೆಯಲ್ಲಿ ವಿದ್ಯಾರ್ಥಿಯ ವಿವರ ಪೋಷಕರ ಆದಾಯ ಮತ್ತು ಶಾಲೆಯ ಮಾಹಿತಿಯನ್ನು ಭರ್ತಿ ಮಾಡಿ.
- ಆನಂತರ ನೀವು ಸ್ಕ್ಯಾನ್ ಮಾಡಿದಂತಹ ನಿಮ್ಮ ವೈಯಕ್ತಿಕ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ನೀವು ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿ ಸಂಖ್ಯೆಯನ್ನು ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸಪ್ಟೆಂಬರ್ 30 2025
ಈಗ ಈ ಒಂದು ಅವಕಾಶವನ್ನು ಎಲ್ಲ ವಿದ್ಯಾರ್ಥಿಗಳು ಬಳಸಿಕೊಂಡು ತಮ್ಮ ವಿದ್ಯಾಭ್ಯಾಸಕ್ಕೆ ಮುಂದುವರಿಸಿಕೊಂಡು ಹೋಗಲು ಇದೊಂದು ಸಹಾಯವಾಗುವಂತಹ ಸ್ಕಾಲರ್ಶಿಪ್ ಆಗಿದೆ. ಆದಕಾರಣ ಎಲ್ಲರೂ ಕೂಡ ಈ ಒಂದು ವಿದ್ಯಾರ್ಥಿ ವೇತನದ ಲಾಭ ಪಡೆಯಿರಿ. ದಿನನಿತ್ಯ ಮಾಹಿತಿ ತಿಳಿಯಲು ನಮ್ಮ ಮಾಧ್ಯಮಕ್ಕೆ ದಿನನಿತ್ಯ ಭೇಟಿ ಮಾಡಿ. ಹಾಗೆ ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.