SSLC Exam 3 Result : 10ನೇ ತರಗತಿ ಪರೀಕ್ಷೆ ಮೂರರ ಫಲಿತಾಂಶ ಇಂದು ಪ್ರಕಟಗೊಂಡಿದೆ | ವಿದ್ಯಾರ್ಥಿಗಳು ಈ ರೀತಿ ತಮ್ಮ ಫಲಿತಾಂಶ ಚೆಕ್ ಮಾಡಬಹುದು!
ಎಲ್ಲರಿಗೂ ನಮಸ್ಕಾರ ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದೇ ಜುಲೈ ತಿಂಗಳ 5ನೇ ತಾರೀಖಿನಿಂದ ಹಿಡಿದು ಜುಲೈ ತಿಂಗಳ 12ನೇ ತಾರೀಕಿನ ತನಕ ಈ ಒಂದು ಎಸ್ಎಸ್ಎಲ್ಸಿ ಪರೀಕ್ಷೆ 3ರ ಪರೀಕ್ಷೆಯು ನಡೆದಿತ್ತು. ಪರೀಕ್ಷೆ ನಡೆದ ನಂತರ ಎಲ್ಲಾ ಪರೀಕ್ಷೆ ತೆಗೆದುಕೊಂಡಿದ್ದಂತಹ ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದರು. ಈಗ ಅಂತಹ ಎಲ್ಲ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎಂದು ಹೇಳಬಹುದು. ಅದೇನೆಂದರೆ 10ನೇ ತರಗತಿ ಪರೀಕ್ಷೆ ಮೂರರ ಫಲಿತಾಂಶವನ್ನು ಇಂದು ಕರ್ನಾಟಕ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು. ಈ ಕೆಳಗಿನ ಲೇಖನದಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಹೇಗೆ ನೋಡಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.
10ನೇ ತರಗತಿ ಪರೀಕ್ಷೆ ಮೂರರ ಫಲಿತಾಂಶ ಪ್ರಕಟ!
ಸುಮಾರು 8 ಲಕ್ಷ 61,000 ವಿದ್ಯಾರ್ಥಿಗಳು ಈ ಒಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ನೋಂದಣಿಯನ್ನು ಮಾಡಿಕೊಂಡಿದ್ದರು. ಇದರಲ್ಲಿ ಸುಮಾರು 6 ಲಕ್ಷ 15,000 ವಿದ್ಯಾರ್ಥಿಗಳು ಮೊದಲು ನಡೆದಂತಹ ಎರಡು ಪರೀಕ್ಷೆಗಳಲ್ಲಿ ಪಾಸಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ತೆರಳಿದ್ದಾರೆ. ಆದರೆ ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷೆ 1 ಮತ್ತು ಪರೀಕ್ಷೆ 2 ರಲ್ಲಿ ಸ್ವಲ್ಪ ತೊಂದರೆ ಉಂಟಾಗಿ ಅವರು ಪರೀಕ್ಷೆ 3ಕ್ಕೆ ಹಾಜರಾಗಿದ್ದರು ಹೀಗೆ ಹಾಜರಾದ ವಿದ್ಯಾರ್ಥಿಗಳು ಪರೀಕ್ಷೆ ಫಲಿತಾಂಶವು ಇಂದು ಪ್ರಕಟಗೊಂಡಿದೆ.
ಈಗ ಎಲ್ಲಾ ವಿದ್ಯಾರ್ಥಿಗಳು ತಮ್ಮ ಎಸ್ ಎಸ್ ಎಲ್ ಸಿ ಪರೀಕ್ಷೆ ಮೂರರ ಫಲಿತಾಂಶವನ್ನು ಸುಲಭವಾಗಿ ಅಧಿಕೃತ ಜಾಲತಾಣದಲ್ಲಿ ವೀಕ್ಷಿಸಬಹುದು. ತಮ್ಮ ಫಲಿತಾಂಶವನ್ನು ಹೇಗೆ ವೀಕ್ಷಿಸಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿವರವಾಗಿ ಈ ಕೆಳಗಿನ ಲೇಖನದಲ್ಲಿ ನಾವು ತಿಳಿಸಿದ್ದೇವೆ ತಪ್ಪದೆ ನೋಡಿ.

ಎಸ್.ಎಸ್.ಎಲ್.ಸಿ ಪರೀಕ್ಷೆ 3 ರಿಸಲ್ಟ್ ಅನ್ನು ನೋಡುವುದು ಹೇಗೆ?
ಎಸ್.ಎಸ್.ಎಲ್.ಸಿ ಪರೀಕ್ಷೆ 3 ರಿಸಲ್ಟ್ ಅನ್ನು ನೋಡಲು ವಿದ್ಯಾರ್ಥಿಗಳು ಈ ಕೆಳಗಿನ ಲಿಂಕ್ ಅನ್ನು ಬಳಸಿ: https://karresults.nic.in
ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ನೀವು ಬೇರೆ ಒಂದು ಪುಟ ತೆರೆದುಕೊಳ್ಳುತ್ತದೆ. ಆ ಪುಟದಲ್ಲಿ ನೀವು ನಿಮ್ಮ ಹುಟ್ಟಿದ ತಾರೀಕು ಮತ್ತು ಅವರ ಪ್ರವೇಶ ಪತ್ರ ಸಂಖ್ಯೆ (ಹಾಲ್ ಟಿಕೆಟ್ ನಂಬರ್) ಅನ್ನು ನಮೂದಿಸಿ ನಂತರ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿದರೆ ವಿದ್ಯಾರ್ಥಿಗಳು ತಮ್ಮ ಎಸ್ ಎಸ್ ಎಲ್ ಸಿ ಪರೀಕ್ಷೆ ಮೂರರಲ್ಲಿ ರಿಸಲ್ಟ್ ಅನ್ನು ಸುಲಭವಾಗಿ ವೀಕ್ಷಿಸಬಹುದು. ವಿದ್ಯಾರ್ಥಿಗಳು ತಮ್ಮ ಫಲಿತಾಂಶದ ಸ್ಕ್ರೀನ್ ಶಾಟ್ ಅನ್ನು ತಮ್ಮ ಮೊಬೈಲ್ ನಲ್ಲಿ ತೆಗೆದುಕೊಳ್ಳಬಹುದು.