Bele Haani Parihara Amount Released: ಬೆಳೆ ಹಾನಿ ಸಮೀಕ್ಷೆ ಪರಿಹಾರ ವಿತರಣೆ! ಎಕರೆಗೆ ಎಷ್ಟು ಹಣ ಪರಿಹಾರ! ಇಲ್ಲಿದೆ ನೋಡಿ ಮಾಹಿತಿ.
ಈಗ ಉತ್ತರ ಕರ್ನಾಟಕದ ರೈತರು ಇತ್ತೀಚಿನ ದಿನಮಾನಗಳಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ತೀವ್ರ ಬೆಳೆ ಹಾನಿಯನ್ನು ಎದುರಿಸುತ್ತಾ ಇದ್ದಾರೆ. ಆದಕಾರಣ ಕಲ್ಬುರ್ಗಿ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈಗ ಅಕಾಲಿಕ ಮಳೆಯಿಂದಾಗಿ ತಮ್ಮ ಫಸಲು ಅಂದರೆ ಬೆಳೆ ನಾಶವಾಗಿದ್ದು ರೈತರ ಆರ್ಥಿಕ ಸಂಕಷ್ಟಕ್ಕೆ ಎದುರಿಸುತ ಇದ್ದಾರೆ.
ಈಗ ಸ್ನೇಹಿತರೆ ರಾಜ್ಯ ಸರ್ಕಾರ ಈ ಸಮಯದಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದಂತಹ ಸಿಎಂ ಸಿದ್ದರಾಮಯ್ಯನವರು ನೇತೃತ್ವದಲ್ಲಿ ರೈತರಿಗೆ ಆರ್ಥಿಕ ನೆರವು ಒದಗಿಸಲು ವಿಶೇಷ ಪರಿಹಾರ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಈ ಒಂದು ಲೇಖನದಲ್ಲಿ ರಾಜ್ಯ ಸರಕಾರದಿಂದ ಒದಗಿಸಲಾಗುವಂತಹ ಬೆಳೆ ಹಾನಿ ಪರಿಹಾರದ ವಿವರಗಳನ್ನು ಮತ್ತು ಅರ್ಜಿ ಸಲ್ಲಿಕೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಬೆಳೆ ಹಾನಿ ಪರಿಹಾರದ ಮಾಹಿತಿ
ಈಗ ನಮ್ಮ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಮಾರ್ಗಸೂಚಿಗಳ ಜೊತೆಗೆ ಈಗ ಹೆಚ್ಚುವರಿ ಆರ್ಥಿಕ ನೆರವನ್ನು ಒದಗಿಸುವ ತೀರ್ಮಾನವನ್ನು ಈಗ ಸರ್ಕಾರಗಳು ತೆಗೆದುಕೊಂಡಿವೆ. ಈಗ ವೈಮಾನಿಕ ಸಮೀಕ್ಷೆ ಮತ್ತು ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಸಿದ್ದರಾಮಯ್ಯನವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
- ಈಗ ಮಳೆಯಾಶ್ರಿತ ಬೆಳೆ ಹಾನಿ ಪ್ರತಿ ಎಕರೆಗೆ ಈಗ 17000 ಹಣವನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ.
- ಹಾಗೇ ನೀರಾವರಿ ಬೆಳೆ ಹಾನಿಗಳಿಗೆ ಪ್ರತಿ ಎಕರೆಗೆ 21,500 ನೀಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
- ಆನಂತರ ಬಹುವಾರ್ಷಿಕ ಬೆಳೆ ಹಾನಿಗಳಿಗೆ ಪ್ರತಿ ಎಕರೆಗೆ 31 ಸಾವಿರ ಹಣವನ್ನು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಈಗಾಗಲೇ ಸ್ನೇಹಿತರೆ ಈ ಒಂದು ಪರಿಹಾರದ ಮತ್ತು ಒಟ್ಟಾರೆಯಾಗಿ 2 ಸಾವಿರ ಕೋಟಿಗಿಂತಲೂ ಹೆಚ್ಚಿನ ಹಣವನ್ನು ಒಳಗೊಂಡಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಈಗ ರೈತರಿಗೆ ಕೂಡಲೇ ಆರ್ಥಿಕ ನೆರವು ಒದಗಿಸುವ ಗುರಿಯನ್ನು ಈ ಒಂದು ಯೋಜನೆ ಹೊಂದಿದೆ.
ಸಮೀಕ್ಷೆ ಮತ್ತು ಪರಿಹಾರದ ವಿತರಣೆ
ಈಗ ನಮ್ಮ ರಾಜ್ಯ ಸರ್ಕಾರ ಬೆಳೆ ಹಾನಿಯ ಮೌಲ್ಯಮಾಪನಕ್ಕಾಗಿ ಕಂದಾಯ ಇಲಾಖೆ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ ಸಮೀಕ್ಷೆಯನ್ನು ಕೈಗೊಂಡಿದೆ. ಈಗ ಈ ಒಂದು ಸಮೀಕ್ಷಾ ಆಧಾರದ ಮೇಲೆ ಅರ್ಹ ರೈತರಿಗೆ ಪರಿಹಾರದ ಮಹತ್ವವನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನಿಮ್ಮ ಬೆಳೆ ಹಾನಿ ಪರಿಹಾರಕ್ಕೆ ಈಗ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ಮೊದಲಿಗೆ ನೀವು ರೈತರು ತಮ್ಮ ಜಮೀನಿನ ಪಹಣಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ಪ್ರತಿಗಳನ್ನು ಸಿದ್ಧಪಡಿಸಿಕೊಳ್ಳಬೇಕು.
- ಆನಂತರ ಅವರು ತಮ್ಮ ಹತ್ತಿರ ಇರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿಯನ್ನು ನೀಡಿ. ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
- ಹಾಗೆ ರೈತರು ತಮ್ಮ ಆಧಾರ್ ಕಾರ್ಡನ್ನು ಬಳಕೆ ಮಾಡಿಕೊಂಡು ಪರಿಹಾರದ ತಂತ್ರಾಂಶದ ಜಾಲತಾಣದಲ್ಲಿ ಅರ್ಜಿಯ ಸ್ಥಿತಿಯನ್ನು ತಿಳಿಯಬಹುದು.
ಹಾಗೆ ಸ್ನೇಹಿತರೆ ಬೆಳೆ ಹಾನಿ ಪರಿಹಾರದ ಜೊತೆಗೆ ರಾಜ್ಯ ಸರ್ಕಾರವು ಪ್ರವಾಹದಿಂದ ಹಾನಿಗೊಳಗಾದಂತಹ ಮೂಲಭೂತ ಸೌಕರ್ಯಗಳಿಗೆ ಈಗ ಪುನರ್ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಈಗ ಮನವಿಯನ್ನು ಸಲ್ಲಿಸಿದೆ ಎಂಬ ಮಾಹಿತಿಯನ್ನು ಕೂಡ ನೀಡಲಾಗಿದೆ. ಈಗ ಇನ್ನು ಕೆಲವೇ ದಿನಗಳಲ್ಲಿ ರೈತರಿಗೆ ಬೆಳೆ ಹಾನಿ ಪರಿಹಾರವನ್ನು ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಈಗ ರಾಜ್ಯ ಸರ್ಕಾರ ಸ್ಪಷ್ಟವಾಗಿ ನೀಡಿದೆ. ಈ ಒಂದು ಮಾಹಿತಿಯನ್ನು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.