Narega Job Card EKYC Update News: ನರೇಗಾ ಯೋಜನೆಯ ಜಾಬ್ ಕಾರ್ಡಿಗೆ EKYC ಕಡ್ಡಾಯ! ಈಗಲೇ ಮಾಹಿತಿ ತಿಳಿಯಿರಿ.
ಈಗ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನರೇಗಾ ಯೋಜನೆ ಅಡಿಯಲ್ಲಿ ವಿತರಣೆ ಮಾಡುವಂತಹ ಈ ಒಂದು ಜಾಬ್ ಕಾರ್ಡ್ ಅನ್ನು ನೀವೇನಾದರೂ ಹೊಂದಿದ್ದರೆ ಈ ಕೂಡಲೇ ಈ ಒಂದು EKYC ಯನ್ನು ನೀವು ಮಾಡಿಸುವುದು ಈಗ ಕಡ್ಡಾಯವಾಗಿದೆ. ಈಗ ಈ ಒಂದು ಯೋಜನೆಯ ಪಾರದರ್ಶಕತೆಯನ್ನು ಹೆಚ್ಚಿಗೆ ಮಾಡುವ ಸಲುವಾಗಿ ಸರಕಾರವು ಈ ಒಂದು ಕ್ರಮವನ್ನು ಜಾರಿಗೆ ಮಾಡಿದ್ದು. ಎಲ್ಲಾ ಸಕ್ರಿಯ ಜಾಬ್ ಕಾರ್ಡ್ಗಳಿಗೆ ನಿಮ್ಮ ಆಧಾರ್ ಕಾರ್ಡ್ ಗಳ ಮೂಲಕ ಈಗ EKYC ಅವಶ್ಯಕ ನೀವು ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ.
ಅದೇ ರೀತಿಯಾಗಿ ಈಗ ನೀವೇನಾದರೂ ಈ ಒಂದು EKYC ಅನ್ನು ಕಡ್ಡಾಯವಾಗಿ ಮಾಡಿಸದೆ ಇದ್ದರೆ ನಿಮ್ಮ ಜಾಬ್ ಕಾರ್ಡ್ ರದ್ದಾಗುವ ರೂಪದಲ್ಲಿ ಇರುತ್ತವೆ. ಹಾಗಿದ್ದರೆ ಈಗ ಈ ಒಂದು ನೆರೆಗಾ ಯೋಜನೆ ಜಾಬ್ ಕಾರ್ಡ್ ಗೆ ಯಾವ ರೀತಿ EKYC ಮಾಡಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ. ಈಗ ದಿನನಿತ್ಯ ಇದೇ ತರದ ಹೊಸ ಮಾಹಿತಿಗಳನ್ನು ನೀವು ತಿಳಿಯಬೇಕೆಂದರೆ ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.
ಪ್ರಮುಖ ಅಂಶಗಳು
ಈಗ ಈ ಒಂದು ಆಧಾರ್ ಕಾರ್ಡ್ ನ ಮೂಲಕ EKYC ಮಾಡಿ ಕೊಳ್ಳಬೇಕಾಗುತ್ತದೆ.
ಆನಂತರ ಅಕ್ಟೋಬರ್ 2025 ರಿಂದ ಮುಖ ಆಧಾರಿತ NMMS ಹಾಜರಾತಿಗಳು ಈಗ ಕಡ್ಡಾಯವಾಗಿದೆ.
ಆನಂತರ ನೊಂದಾಯಿತ ಮತ್ತು ಸಕ್ರಿಯ ಜಾಬ್ ಕಾರ್ಡ್ಗಳಿಗೆ ಮಾತ್ರ EKYC ಕಡ್ಡಾಯವಾಗಿದೆ.
ಈ ಜಾಬ್ ಕಾರ್ಡ್ ಅನ್ನು ಏಕೆ ಪಡೆಯಬೇಕು?
ಈಗ ನೀವೇನಾದರೂ ಈ ಒಂದು ಜಾಬ್ ಕಾರ್ಡ್ ಅನ್ನು ಪಡೆದುಕೊಂಡಿದ್ದೆ ಆದರೆ ಈಗ ನರೇಗಾ ಯೋಜನೆ ಅಡಿಯಲ್ಲಿ ನೀವು ನಿಮ್ಮ ಗ್ರಾಮೀಣ ಕುಟುಂಬಗಳಿಗೆ ವಾರ್ಷಿಕವಾಗಿ 100 ದಿನಗಳ ಉದ್ಯೋಗ ಭರವಸೆಯನ್ನು ನೀಡಲಾಗುತ್ತದೆ. ಅಷ್ಟೇ ಅಲ್ದೆ ನೀವು ಈಗ ಪ್ರತಿದಿನದ ಕೂಲಿ ಎಂದು ಸುಮಾರು 370ಗಳ ವರೆಗೆ ನೀವು ದಿನನಿತ್ಯ ಆದಾಯವನ್ನು ಪಡೆಯಬಹುದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಇತ್ತೀಚಿನ ಭಾವಚಿತ್ರ
- ಮೊಬೈಲ್ ನಂಬರ್
- ಬ್ಯಾಂಕ್ ಖಾತೆಯ ವಿವರ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವೇನಾದರೂ ಈ ಒಂದು ಜಾಬ್ ಕಾರ್ಡ್ ಅನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ನೀವು ಪಡೆಯಬೇಕೆಂದರೆ ಈಗ ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ವ್ಯಾಪ್ತಿಗೆ ಬರುವಂತಹ ಗ್ರಾಮ ಪಂಚಾಯತಿಗಳಿಗೆ ನೇರವಾಗಿ ಭೇಟಿ ನೀಡಿ. ನೀವು ಈ ಮೇಲೆ ಎಲ್ಲಾ ದಾಖಲೆಗಳನ್ನು ನೀಡಿ. ಆನಂತರ ಅರ್ಜಿ ನಮುನೆಯನ್ನು ಪಡೆದುಕೊಂಡು ಭರ್ತಿ ಮಾಡಿ. ನೀವು ಕೂಡ ಈಗ ಈ ಒಂದು ಜಾಬ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.