Social And Education Survey Start To State Goverment: ರಾಜ್ಯದಲ್ಲಿ ಈಗ ಸೆಪ್ಟೆಂಬರ್ 22 ರಿಂದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಪ್ರಾರಂಭ! ಈ ಎಲ್ಲ ದಾಖಲೆಗಳು ಕಡ್ಡಾಯ!
ಈಗ ನಮ್ಮ ಕರ್ನಾಟಕ ರಾಜ್ಯವು ಹಿಂದುಳಿದ ವರ್ಗಗಳ ಆಯೋಗವು ಈಗ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸೆಪ್ಟೆಂಬರ್ 22ರಂದು ಪ್ರಾರಂಭ ಮಾಡಲಿದೆ. ಈಗ ಈ ಒಂದು ಸಮೀಕ್ಷೆಯು ರಾಜ್ಯದ ಎಲ್ಲಾ ನಾಗರಿಕರ ಶೈಕ್ಷಣಿಕ ಹಾಗೂ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ. ಸರ್ಕಾರದ ನೀತಿ ನಿರೂಪಣೆಗೆ ಆಧಾರವನ್ನು ನೀಡಲು ಮುಂದಾಗುತ್ತಿದೆ. ಈ ಒಂದು ಸಮೀಕ್ಷೆಯ ಭಾಗವಾಗಿ ಈಗ ಎಸ್ಕಾಂ ಇಲಾಖೆಯಿಂದ ಪ್ರತಿ ಮನೆಗೆ ಈಗ ಯೂನಿಕ್ ಹೌಸ್ ಹೋಲ್ಡ್ ಐಡೆಂಟಿಫಿಕೇಶನ್ ಸಂಖ್ಯೆಯನ್ನು ಜನರೇಟ್ ಮಾಡಿ ಸ್ಟಿಕ್ಕರ್ ಅನ್ನು ಅಂಟಿಸುವ ಕಾರ್ಯ ಪ್ರಾರಂಭವಾಗಿದೆ. ಈಗ ಈ ಒಂದು ಲೇಖನದ ಮೂಲಕ ನೀವು ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ತಿಳಿಯಬಹುದು.
ಈ ಒಂದು ಸಮೀಕ್ಷೆ ಮುಖ್ಯ ಉದ್ದೇಶ ಏನು?
ಈಗ ಈ ಒಂದು ಸಮೀಕ್ಷೆ ಮುಖ್ಯ ಉದ್ದೇಶವೇನೆಂದರೆ ಈಗ ನಮ್ಮ ರಾಜ್ಯದ ಜನರ ಶೈಕ್ಷಣಿಕ ಮಟ್ಟ ಮತ್ತು ಜಾತಿ ಉಪಜಾತಿ, ಆರ್ಥಿಕ ಸ್ಥಿತಿ ಕೌಶಲ್ಯ ಅಗತ್ಯತೆಗಳು ಮತ್ತು ಇತರೆ ಸಾಮಾಜಿಕ ಅಂಶಗಳನ್ನು ದಾಖಲಿಸಿ ಈಗ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರವಾಗಿ ಆಧಾರವನ್ನು ಸೃಷ್ಟಿಸುವುದು. ಈ ಒಂದು ಸಮೀಕ್ಷೆ ಮುಖ್ಯ ಉದ್ದೇಶವಾಗಿದೆ. ಅಷ್ಟೇ ಅಲ್ಲದೆ ಈ ಒಂದು ಡೇಟಾವು ಈಗ ರಾಜ್ಯದ ಅಭಿವೃದ್ಧಿಗೆ ಮತ್ತು ಸಮಾಜದ ಎಲ್ಲಾ ವರ್ಗಗಳಿಗೆ ಸಮಾನ ಅವಕಾಶಗಳನ್ನು ನೀಡಲು ಇದು ಸಹಾಯವಾಗುತ್ತದೆ. ಅಷ್ಟೇ ಅಲ್ಲದೆ ಸಾರ್ವಜನಿಕರು ಈಗ ಸಮೀಕ್ಷೆ ಸಂಪೂರ್ಣ ಸಹಕಾರ ನೀಡುವಂತೆ ಸರ್ಕಾರ ಮನವಿಯನ್ನು ಮಾಡಿಕೊಂಡಿದೆ.
ಸಮೀಕ್ಷೆಯ ಮುಖ್ಯ ವಿವರಗಳು
ಈಗ ಈ ಒಂದು ಸಮೀಕ್ಷೆ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ನಡೆಯಲಿದ್ದು. ಈಗ ಸುಮಾರು 60 ಪ್ರಶ್ನೆಗಳನ್ನು ಇದು ಒಳಗೊಂಡಿರುತ್ತದೆ. ಅಷ್ಟೇ ಅಲ್ಲದೆ ಈಗ ಸಮೀಕ್ಷೆಯನ್ನು ಮಾಡಲು ಬರುವಂತಹ ಅಭ್ಯರ್ಥಿಗಳು ಈಗ ಮೊಬೈಲ್ ಅಪ್ಲಿಕೇಶನ್ ಮೂಲಕ ಮನೆ ಮನೆಗೆ ಭೇಟಿಯನ್ನು ನೀಡಿ ಮಾಹಿತಿಯನ್ನು ಸಂಗ್ರಹಣೆ ಮಾಡುತ್ತಾರೆ. ಹಾಗೆ ಈ ಒಂದು ಸಮೀಕ್ಷೆಗೆ ಪಡಿತರ ಚೀಟಿ ಮತ್ತು ಆಧಾರ್ ಸಂಖ್ಯೆ ಆಧಾರದ ಮೇಲೆ ಪ್ರಾರಂಭವಾಗುತ್ತದೆ. ಹಾಗೆ ಸಾರ್ವಜನಿಕರು ತಮ್ಮ ಮಾಹಿತಿಗಳನ್ನು ನಿಖರವಾಗಿ ನೀಡಿ ಸಮೀಕ್ಷೆಯನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕಾಗುತ್ತದೆ.
ಅಗತ್ಯ ದಾಖಲೆಗಳು ಏನು?
ಸಮೀಕ್ಷೆ ಮಾಡಲು ಬಂದಂತಹ ಸಮಯದಲ್ಲಿ ನೀವು ಈ ಕೆಳಗಿನ ದಾಖಲೆಗಳನ್ನು ತೆಗೆದಿಟ್ಟುಕೊಳ್ಳಬೇಕಾಗುತ್ತದೆ.
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಮತದಾರರ ಗುರುತಿನ ಚೀಟಿ
- ಅಂಗವಿಕಲ ಇದ್ದರೆ ಅಂಗವಿಕಲತೆ ಪ್ರಮಾಣ ಪತ್ರ
- ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
ಹಾಗೆ ಆಧಾರ್ ಕಾರ್ಡ್ ಗೆ ಲಿಂಕ್ ಇರುವಂತ ಮೊಬೈಲ್ ನಂಬರ್ ಸಂಖ್ಯೆ ಚಾಲ್ತಿಯಲ್ಲಿ ಇರಬೇಕಾಗುತ್ತದೆ. ಓಟಿಪಿ ಪರಿಶೀಲನೆಗಾಗಿ ಈ ಒಂದು ಸಂಖ್ಯೆಯನ್ನು ಅವರು ಬಳಕೆ ಮಾಡಿಕೊಳ್ಳುತ್ತಾರೆ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಇರುವಂತಹ ಮೊಬೈಲ್ ನಂಬರ್ ಚಾಲ್ತಿಯಲ್ಲಿ ಇಲ್ಲದೆ ಇದ್ದರೆ ನಿಮ್ಮ ಹತ್ತಿರ ಇರುವ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ. ಹೊಸ ನಂಬರನ್ನು ಲಿಂಕ್ ಮಾಡಿಸಿಕೊಳ್ಳಬೇಕಾಗುತ್ತದೆ.
ಸಮೀಕ್ಷೆ ಪ್ರಶ್ನೆ ಏನು?
ಈಗ ಈ ಒಂದು ಸಮೀಕ್ಷೆಗೆ ಪ್ರಶ್ನಾವಳಿ ಈ ಕೆಳಗಿನ ವಿವರಗಳನ್ನು ಒಳಗೊಂಡಿರುತ್ತದೆ.
ಶೈಕ್ಷಣಿಕ ಸ್ಥಿತಿ ಮತ್ತು ವಿದ್ಯಾರ್ಥಿ ಕೌಶಲ್ಯ ತರಬೇತಿ ಅಗತ್ಯತೆ ಕುಟುಂಬದ ಆದಾಯ ಮತ್ತು ಆರ್ಥಿಕ ಸ್ಥಿತಿ ಇತರೆ ಸಾಮಾಜಿಕ ಮತ್ತು ಆರ್ಥಿಕ ಸಮಾಜದ ಮಾಹಿತಿಗಳನ್ನು ಇದು ಒಳಗೊಂಡಿರುತ್ತದೆ.
ಈಗ ಈ ಒಂದು ಸಮೀಕ್ಷೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಈಗ ರಾಷ್ಟ್ರೀಯ ಕ್ರೀಡೆ ಕ್ರಾಪ್ಸ್ ಪದವಿ ವಿದ್ಯಾರ್ಥಿಗಳ ಮೂಲಕ ಜಾಗೃತಿ ಅಭಿಯಾನವನ್ನು ಕೂಡ ಆಯೋಜನೆಯನ್ನು ಮಾಡಲಾಗಿದೆ. ಈ ಒಂದು ಅಭಿಯಾನವು ಸಮೀಕ್ಷೆಯ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸುವಂತಹ ಗುರಿಯನ್ನು ಹೊಂದಿದೆ. ಈಗ ಪ್ರತಿಯೊಬ್ಬ ನಾಗರಿಕನು ಕೂಡ ಈ ಒಂದು ಸಮೀಕ್ಷೆಯ ಸಹಕಾರವನ್ನು ನೀಡಿ. ನಿಮ್ಮ ದಾಖಲೆಗಳನ್ನು ನೀಡುವುದರ ಮೂಲಕ ನಮ್ಮ ರಾಜ್ಯದ ಭವಿಷ್ಯಕ್ಕೆ ಈಗ ನೀವು ಕೊಡುಗೆಯನ್ನು ನೀಡಬೇಕಾಗುತ್ತದೆ.