Ration Card Applying Soon: ಈಗ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಇನ್ನು ಶೀಘ್ರದಲ್ಲಿ ಪ್ರಾರಂಭ! ಆಹಾರ ಇಲಾಖೆಯಿಂದ ಮಹತ್ವದ ಮಾಹಿತಿ.
ಈಗ ಯಾರೆಲ್ಲಾ ಈ ಒಂದು ಹೊಸ ಬಿಪಿಎಲ್ ರೇಷನ್ ಕಾರ್ಡ್ ಗಾಗಿ ಕಾದು ಕೂತಿದ್ದೀರಾ ಅಂತವರಿಗೆ ಈಗ ಸಚಿವರಿಂದ ಮಹತ್ವದ ಮಾಧ್ಯಮ ಹೊರ ಬಿದ್ದಿದೆ. ಈಗ ಸ್ನೇಹಿತರೆ ಇನ್ನು ಕೆಲವೇ ದಿನಗಳಲ್ಲಿ ಈ ಒಂದು ಹೊಸ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂಬ ಮಾಹಿತಿಯನ್ನು ಈಗ ನೀಡಿದ್ದಾರೆ. ಅದೇ ರೀತಿಯಾಗಿ ಸ್ನೇಹಿತರೆ ಈಗ ಈ ಒಂದು ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿ ಕಳೆದ ನಾಲ್ಕು ಐದು ವರ್ಷಗಳಿಂದ ಕಾತುರದಿಂದ ಕಾಯುತ್ತಿರುವಂತ ಲಕ್ಷಾಂತರ ಜನರಿಗೆ ಈಗ ಹೊಸ ಅರ್ಜಿದಾರರಿಗೆ ಇದು ಒಂದು ಹೊಸ ಭರವಸೆ ಎಂದು ಹೇಳಬಹುದು. ಏಕೆಂದರೆ ಈಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಈಗ ಮತ್ತಷ್ಟು ಮಹತ್ವದ ಬೆಳವಣಿಗೆಗಳು ನಡೆದಿದ್ದು. ಈಗ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಇನ್ನು ಶೀಘ್ರದಲ್ಲಿ ಈಗ ಬಿಡುಗಡೆ ಮಾಡಲಾಗುತ್ತದೆ.

ಕೇಂದ್ರ ಸರ್ಕಾರದಿಂದ ಹೊಸ ರೇಷನ್ ಕಾರ್ಡ್ ವಿತರಣೆಗೆ ತೀರ್ಮಾನ
ಈಗ ಸ್ನೇಹಿತರೆ ಸಾರ್ವಜನಿಕ ವಿತರಣಾ ವ್ಯವಸ್ಥೆ ವ್ಯಾಪ್ತಿ ಅಡಿಯಲ್ಲಿ ಆಹಾರ ಭದ್ರತಾ ಕಾಯ್ದೆ ಅಡಿ ಮತ್ತು ರಾಜ್ಯದಲ್ಲಿ ಗರಿಷ್ಠ ಮಿತಿ 4.1 ಕೋಟಿ ಹಾಗೂ ಈ ಒಂದು ಸಂಖ್ಯೆಯನ್ನು ಇದು 2011ರ ಜನಗಣತಿಯ ಆಧಾರದ ಮೇಲೆ ಈಗ ನಿಗದಿ ಮಾಡಲಾಗಿದೆ.
ಅದೇ ರೀತಿಯಾಗಿ ಈ ಒಂದು ಹಿನ್ನೆಲೆಯಲ್ಲಿ ಈಗ ರಾಜ್ಯದ ಆಹಾರ ಸಚಿವರಾದಂತ ಕೆಎಚ್ ಮುನಿಯಪ್ಪ ಅವರು ಈಗ ಅದೇ ರೀತಿಯಾಗಿ ಈಗ ಅವರು ಕೇಂದ್ರದ ಆಹಾರ ಸಚಿವ ಆದಂತಹ ಪ್ರಹಲ್ದಾ ಜೋಶಿಯವರಿಗೆ ಪತ್ರವನ್ನು ಬರೆದು ಈಗ ಗರಿಷ್ಟ ಫಲಾನುಭವಿಗಳ ಮಿತಿಯನ್ನು 4.60 ಕೋಟಿಗೆ ಹೆಚ್ಚಿಸುವಂತೆ ಮನವಿಯನ್ನು ಸಲ್ಲಿಸಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಅದೇ ರೀತಿಯಾಗಿ ಈಗ ಕೇಂದ್ರ ಸರ್ಕಾರವು ಈ ಒಂದು ಬೇಡಿಕೆಗೆ ಅನುಕೂಲಕರವಾದಂತಹ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ. ಇದರಿಂದ ಹೊಸ ಅರ್ಜಿದಾರರಿಗೆ ಹಾಗೂ ರೇಷನ್ ಕಾರ್ಡ್ ವಿತರಣೆ ಮಾಡುವಲ್ಲಿ ಇರುವ ಅಡೆತಡೆಗಳು ನಿವಾರಣೆಯಾಗಲಿವೆ.
ಅದೇ ರೀತಿಯಾಗಿ ಈಗ ನಮ್ಮ ರಾಜ್ಯದಲ್ಲಿ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಸಾರ್ವಜನಿಕ ಸೇವಾ ಕೇಂದ್ರಗಳ ಮೂಲಕ ಒಟ್ಟಾರೆಯಾಗಿ ಈಗ ನಮ್ಮ ರಾಜ್ಯದಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಕೋರಿ ಒಟ್ಟು 39 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಈಗಾಗಲೇ ಸಲ್ಲಿಕೆಯಾಗಿದೆ. ಅದೇ ರೀತಿಯಾಗಿ ಅವುಗಳಲ್ಲಿ ಈಗ 26 ಲಕ್ಷ ರೇಷನ್ ಕಾರ್ಡ್ ಅರ್ಜಿಗಳನ್ನು ನಮೂದೆ ಮಾಡಿಕೊಂಡಿದ್ದು 9 ಲಕ್ಷ ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ.
ಅದೇ ರೀತಿಯಾಗಿ ಇವುಗಳಲ್ಲಿ ಕೆಲವೊಂದಷ್ಟು ಅರ್ಜಿಗಳು ಇನ್ನೂ ಪರಿಶೀಲನೆಯಲ್ಲಿ ಇವೆ ಎಂಬ ಮಾಹಿತಿಯನ್ನು ಸರ್ಕಾರವು ನೀಡಿದೆ.
ಇಂಥವರಿಗೆ ಮಾತ್ರ ಈಗ ಬಿಪಿಎಲ್ ಕಾರ್ಡ್
ಈಗ ಸ್ನೇಹಿತರೆ ಸಾಮಾನ್ಯ ಅರ್ಜಿದಾರರಿಗಿಂತ ತುರ್ತು ಆಧಾರದ ಮೇಲೆ ಹೇಗೆ ಕೆಲವೊಂದು ಅಷ್ಟು ಜನರಿಗೆ ತ್ವರಿತವಾಗಿ ಈ ಒಂದು ರೇಷನ್ ಕಾರ್ಡ್ಗಳನ್ನು ನೀಡಲಾಗುತ್ತದೆ ಅಂದರೆ ಹೃದಯ ರೋಗ ಕ್ಯಾನ್ಸರ್ ಮುಂತಾದ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಪ್ರತಿಯೊಬ್ಬರಿಗೂ ಕೂಡ ಈ ಒಂದು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.
ಅಷ್ಟೇ ಅಲ್ಲದೆ ಸ್ನೇಹಿತರು ಈಗ ನೀವೇನಾದರೂ ಈ ಒಂದು ರೇಷನ್ ಕಾರ್ಡ್ ನಲ್ಲಿ ಇರುವಂತ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬೇಕೆಂದುಕೊಂಡಿದ್ದರು ಈಗ ಸರ್ಕಾರವು ಅದನ್ನು ಕೂಡ ಪ್ರಾರಂಭದಲ್ಲಿ ಇಟ್ಟಿದೆ. ಆದಕಾರಣದಲ್ಲಿ ನೀವು ಕೂಡ ಹೊಸ ರೇಷನ್ ಕಾರ್ಡ್ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದಾಗಿರುತ್ತದೆ.