Gruhalakshmi Pending Amount Released Big Update: ಗೃಹಲಕ್ಷ್ಮಿ ಯೋಜನೆ ಹಣ ಜಮೆ ಕುರಿತು ಮತ್ತೊಂದು ಹೊಸ ಅಪ್ಡೇಟ್! ಮಹಿಳೆಯರಿಗೆ ಸಿಹಿ ಸುದ್ದಿ!
ಈಗ ನಮ್ಮ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಆರ್ಥಿಕವಾಗಿ ಬೆಂಬಲ ನೀಡುವ ಉದ್ದೇಶದಿಂದಾಗಿ ಈಗ ಪ್ರಾರಂಭ ಮಾಡಿದಂತಹ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ. ಈಗ ಈ ಒಂದು ಯೋಜನೆ ಅಡಿಯಲ್ಲಿ ಪ್ರತಿ ಮಹಿಳೆಯರಿಗೂ ಕೂಡ ಮಾಸಿಕವಾಗಿ 2,000 ಹಣವನ್ನು ಸರ್ಕಾರ ನೀಡುತ್ತಾ ಬಂದಿತ್ತು. ಅದೇ ರೀತಿಯಾಗಿ ಈಗ ಪೆಂಡಿಂಗ್ ಇರುವಂತಹ ಹಣದ ಬಗ್ಗೆ ನಮ್ಮ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಮತ್ತಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಆ ಒಂದು ಮಾಹಿತಿ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇದರಲ್ಲಿ ಇದೆ.
ಗೃಹಲಕ್ಷ್ಮಿ ಯೋಜನೆಯ ಮಾಹಿತಿ
ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ ನಮ್ಮ ಕರ್ನಾಟಕ ಸರ್ಕಾರದ ಒಂದು ಪ್ರಮುಖ ಕಲ್ಯಾಣ ಯೋಜನೆಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯವನ್ನು ಮಾಡುವ ಉದ್ದೇಶದಿಂದಾಗಿ ಈ ಒಂದು ಯೋಜನೆಯನ್ನು ಈಗ ಬಿಡುಗಡೆ ಮಾಡಲಾಗಿದೆ. ಈ ಒಂದು ಯೋಜನೆಯ ಮೂಲಕ ಈಗ ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ಅವರ ಖಾತೆಗಳಿಗೆ ನೇರವಾಗಿ ಜಾಮಾಡಲಾಗುತ್ತಿದೆ.
ಅದೇ ರೀತಿಯಾಗಿ ಈಗ ಮಹಿಳೆಯರ ಆರ್ಥಿಕ ಸ್ವಾಮಾವಲಂಬನೆಯನ್ನು ಉತ್ತೇಜಿಸುವ ಸಲುವಾಗಿ ಈಗ ಈ ಒಂದು ಯೋಜನೆಯನ್ನು ಈಗ ಬಿಡುಗಡೆ ಮಾಡಲಾಗಿದೆ. ಹಾಗೆ ಈಗ ಈ ಒಂದು ಯೋಜನೆಯು ವಿಶೇಷವಾಗಿ ಕಡಿಮೆ ಆದಾಯದ ಕುಟುಂಬಗಳಿಗೆ ನೆರವಾಗುತ್ತದೆ ಮತ್ತು ಬೆಂಬಲವನ್ನು ನೀಡುತ್ತಾ ಇದೆ.
ಹಣ ಜಮೆಯ ಕುರಿತು ಅಪ್ಡೇಟ್
ಈಗ ಇತ್ತೀಚಿಗೆ ಮಾಧ್ಯಮಗಳೊಂದಿಗೆ ಮಾತನಾಡಿದಂತಹ ಸಚಿವೆ ಆದಂತ ಲಕ್ಷ್ಮಿ ಹೆಬ್ಬಾಳಕರ್ ಅವರು ಈಗ ಮಹಿಳೆಯರು ಕಾಯುತ್ತಿದ್ದಂತ ಈ ಒಂದು ಗೃಹಲಕ್ಷ್ಮಿ ಹಣವನ್ನು ಮುಂದಿನ ವಾರದಲ್ಲಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಒಟ್ಟಾರೆ ಈಗ ಬಾಕಿ ಇರುವಂತ ಎರಡು ತಿಂಗಳ ಹಣವನ್ನು ಸೇರಿಸಿ ಮಹಿಳೆಯರಿಗೆ 6000 ಹಣವನ್ನು ನೇರವಾಗಿ ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಗೃಹಲಕ್ಷ್ಮಿ ಹಣವನ್ನು ಚೆಕ್ ಮಾಡುವುದು ಹೇಗೆ?
- ಈಗ ನೀವೇನಾದರೂ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವನ್ನು ಚೆಕ್ ಮಾಡಿಕೊಳ್ಳಬೇಕೆಂದರೆ ಮೊದಲು ನಿಮ್ಮ ಮೊಬೈಲಲ್ಲಿ ಪ್ಲೇ ಸ್ಟೋರ್ ಗೆ ಹೋಗಿ ಅದ್ರಲ್ಲಿ DBT ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಆನಂತರ ನೀವು ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಎಂಟರ್ ಮಾಡಬೇಕಾಗುತ್ತದೆ.
- ಆನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರೋ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ.
- ಆನಂತರ ನೀವು ನಿಮ್ಮ ಮೊಬೈಲ್ ಗೆ ಬಂದು ಒಟಿಪಿ ಅನ್ನು ಎಂಟರ್ ಮಾಡಿ ವೇರಿಫೈ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ನೀವು ನಿಮ್ಮ ನೆನಪಿನಲ್ಲಿ ಉಳಿಯುವ ಒಂದು ನಾಲ್ಕು ಆಯ್ಕೆಯ MPIN ಅನ್ನು ಅದರಲ್ಲಿ ಕ್ರಿಯೇಟ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ನೀವು ಮತ್ತೊಮ್ಮೆ MPIN ಎಂಟರ್ ಮಾಡಿ. ಆನಂತರ ಲಾಗಿನ್ ಆಗಬೇಕಾಗುತ್ತದೆ.
- ಆನಂತರ ಅದರಲ್ಲಿ ಪೇಮೆಂಟ್ ಸ್ಟೇಟಸ್ ಎಂಬುದರ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು.
- ಆನಂತರ ಅದರಲ್ಲಿ ನಿಮಗೆ ಇದುವರೆಗೂ ಕೂಡ ಜಮಾ ಆಗಿರುವ ಪ್ರತಿಯೊಂದು ಕಂತಿನ ವಿವರಗಳು ಅಂದರೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ.